ದಾವಣಗೆರೆಯಲ್ಲಿ ಆಗಷ್ಟ್ 13 ರಂದು ನಡೆಯಲಿರುವ ದಾವಣಗೆರೆ ಜಿಲ್ಲಾ ಶಿವಸಿಂಪಿ ಸಮಾವೇಶ 2023 ರ ಕರಪತ್ರಗಳನ್ನು ಚಿತ್ರದುರ್ಗ ಮುರುಘಾಮಠದ ಶ್ರೀ ಬಸವಪ್ರಭು ಮಹಾಸ್ವಾಮೀಜಿಗಳು ಬಿಡುಗಡೆಗೊಳಿಸಿ ಸಮಾವೇಶ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.. ಈ ವೇಳೆ ಗೌರವಾಧ್ಯಕ್ಷರಾದ ಬೂಸ್ನೂರು ಗುರುಬಸಪ್ಪ, ಮಾಜಿ ಅಧ್ಯಕ್ಷರಾದ ಹೇಮಣ್ಣ ಹೆಚ್ ಕೆ, ಕಣಕುಪ್ಪಿ ಮುರುಗೇಶಪ್ಪ, ಕಾರ್ಯದರ್ಶಿ ಪ್ರಕಾಶ್ ಬೂಸ್ನೂರು, ಖಜಾಂಚಿ ಜಗದೀಶ್ ಬಾವಿಕಟ್ಟಿ, ಮಾಧ್ಯಮ ಕಾರ್ಯದರ್ಶಿ ಶಿವಕುಮಾರ್ ಬಿ ಎಂ, ಸಹ ಕಾರ್ಯದರ್ಶಿ ಜ್ಞಾನೇಶ್ವರ್ ಜವಳಿ ಮುಂತಾದವರು ಹಾಜರಿದ್ದರು.