ದಾವಣಗೆರೆಯಲ್ಲಿ ಆಕ್ಸಿಜನ್-ವೆಂಟಿಲೇಟರ್ ಸಮಸ್ಯೆ ಇಲ್ಲ

ದಾವಣಗೆರೆ.ಏ.೨೧; ಜಿಲ್ಲೆಯಲ್ಲಿ ಕೊವಿಡ್ ರೋಗಿಗಳಿಗೆ ಆಕ್ಸಿಜನ್, ವೆಂಟಿಲೇಟರ್ ಕೊರತೆ ಕಂಡುಬಂದಿಲ್ಲ
ಎಂದು ಜಿಲ್ಲಾಉಸ್ತುವರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇಲ್ಲಿಯವರೆಗೂ ೮೪೩ ಕೋರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.ಜಿಲ್ಲಾಡಳಿತ ಕೊವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಹಾಗೂ ಬೆಡ್ ನ ಕೊರತೆ ಕಂಡುಬಂದಿಲ್ಲ.
ಜಿಲ್ಲೆಯಲ್ಲಿ ೨೮೦೦ ಬೆಡ್ ಗಳಿವೆ ಇಲ್ಲಿಯವರೆಗೆ ೨೯೩ ಮಾತ್ರ ಉಪಯೊಗದಲ್ಲಿದ್ದು ಉಳಿದಂತೆ ೨೧೩೨ ಬೆಡ್ ಗಳು ಖಾಲಿ ಇದೆ. ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮ ವಹಿಸಿದೆ. ಜಿಲ್ಲೆಯಲ್ಲಿ ಕೊವಿಡ್ ನಿಂದ ಯಾವುದೇ ಸಾವು ಸಂಭವಿಸಿಲ್ಲ. ಪ್ರಾಣರಕ್ಷಣೆ ಕೆಲಸ ಜಿಲ್ಲಾಡಳಿತ ಮಾಡಿದೆ. ಹೊರಭಾಗದಿಂದ ಜಿಲ್ಲೆಗೆ ಬರುವ ವಾಹನಗಳು ಹಾಗೂ ಜನರನ್ನು ಗಡಿಭಾಗದಲ್ಲಿ ತಡೆದು ತಪಾಸಣೆ ಮಾಡುವ ಬಗ್ಗೆ ಸೂಚನೆ ನೀಡಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಬದ್ದವಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ಕರ್ಫ್ಯೂ ಜಾರಿ ಮಾಡಿದೆ. ೧೪೪ ಸೆಕ್ಷನ್ ಜಾರಿಯಾಗಿದೆ ಜನರು ಸಹ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.ಮಾಸ್ಕ್ ಧರಿಸದೇ ಹೊರಬರಬಾರದು ಒಂದು ವೇಳೆ ಹಾಗೇ ಬಂದರೆ ದಂಡ ಖಚಿತ. ಜನಸಂದಣಿ ಬಗ್ಗೆ ನಿಯಂತ್ರಣ ವಹಿಸಬೇಕು. ಜಾತ್ರೆ,ತೇರು,ದೇವಸ್ಥಾನ ಬಂದ್ ಮಾಡಬೇಕು. ರಾಜಕೀಯ ಸಭೆ ಮಾಡುವಂತಿಲ್ಲ.ಮಸೀದಿ,ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳು ಬಂದ್ ಮಾಡಲಾಗಿದೆ. ಅಂಬ್ಯೂಲೆನ್ಸ್ಗಳಲ್ಲಿ ಆಕ್ಸಿಜನ್ ಕೊರತೆಯ ಬಗ್ಗೆ ಮಾಹಿತಿ ಬಂದಿದೆ. ಸಾರ್ವಜನಿಕರಿಗೆ ಕೊರತೆಯಾಗದಂತೆ ಜಿಲ್ಲಾಡಳಿತ ಅಗತ್ಯ ವ್ಯವಸ್ಥೆ ಮಾಡಿದೆ. ಜಿಲ್ಲೆಯಲ್ಲಿ ಕೋವಿಡ್
ವಾಕ್ಸಿನ್ ಹೆಚ್ಚು ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಅವಶ್ಯಕತೆ ಇದ್ದಷ್ಟು ಪೂರೈಕೆಗೆ ಸರ್ಕಾರ ಬದ್ದವಾಗಿದೆ. ಜಿಲ್ಲೆಯ ಎಲ್ಲಾ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ.ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಮಾತನಾಡಿದ್ದೇವೆ ಮುಂದಿನ ದಿನಗಳಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದರು.ಮುಖ್ಯಮಂತ್ರಿಗಳು ವಿಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ಕರ್ಫ್ಯೂ ಜಾರಿ ಮಾಡಿದ್ದಾರೆ.
ತಾಂತ್ರಿಕ ಸಮಿತಿಜೊತೆ ಸಭೆ ನಡೆಸಿ, ಸಲಹಾ ಸಮಿತಿ ಮಾರ್ಗದರ್ಶನದ  ಸೂಚನೆ ಮೇರೆಗೆ ರಾಜ್ಯ ಸರ್ಕರ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಹೊಸದಾಗಿ ೨ ನೇ ಅಲೆ ಬಂದ ಮೇಲೆ ವಾಕ್ಸಿನ್‌ಗಾಗಿ ಸಾಕಷ್ಟು ಜನರು ಬರುತ್ತಿದ್ದಾರೆ. ಜನ ಅರಿವು ಪಡೆದು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಸಾರ್ವಜನಿಕರೆಲ್ಲರೂ ವಾಕ್ಸಿನ್ ಪಡೆಯಬೇಕು ಎಂದು ಮನವಿ ಮಾಡಿದರು.ಈವೇಳೆಸಂಸದ ಜಿ.ಎಂ ಸಿದ್ದೇಶ್ವರ್, ಶಾಸಕರಾದ ಎಸ್.ಎ ರವೀಂದ್ರನಾಥ್, ಎಸ್.ವಿ ರಾಮಚಂದ್ರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ,ಮೇಯರ್ ಎಸ್.ಟಿ ವೀರೇಶ್,ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಹಾಗೂ ಅಧಿಕಾರಿಗಳು ಇದ್ದರು.