ದಾವಣಗೆರೆಯಲ್ಲಿ ಅಭಿಮಾನಿಗಳಿಂದ ಸಂಭ್ರಮೋತ್ಸವ

ದಾವಣಗೆರೆ.ಮೇ.೧೯; ಮಾಜಿ ನಗರಸಭೆ ಅಧ್ಯಕ್ಷ ಕಾಂಗ್ರೆಸ್ ಹಿರಿಯ ಮುಖಂಡ ಬಿ ವೀರಣ್ಣನವರ ನೇತೃತ್ವದಲ್ಲಿ  ಸಿದ್ದರಾಮಯ್ಯನವರ ಪಟ್ಟಾಭಿಷೇಕ ಘೋಷಣೆಯಾದ ನಂತರ ಸಂಭ್ರಮ ಆಚರಣೆ ಮಾಡಲಾಯಿತುದಾವಣಗೆರೆ ನಗರದ ಹೊಂಡದ ಸರ್ಕಲ್  ನಲ್ಲಿ ಎರಡನೇ ಬಾರಿಗೆ ನೂತನ  ಮುಖ್ಯಮಂತ್ರಿ ಆದ ಸಿದ್ದರಾಮಯ್ಯರನವರ    ಪರಘೋಷಣೆ ಕೂಗಿ ಪಟಾಕಿ ಸಿಡಿಸಲಾಯಿತು ನಂತರ ಕಾಂಗ್ರೆಸ್ ಕಾರ್ಯಕರ್ತರು   ಸಿಹಿ ಯನ್ನು ಹಂಚಲಾಯಿತು  ಈ ಸಂದರ್ಭದಲ್ಲಿ ಮಾತನಾಡಿದ.  ಮಾಜಿ ನಗರಸಭೆ ಅಧ್ಯಕ್ಷರುಹಾಗೂ ಕಾಂಗ್ರೆಸ್ ಹಿರಿಯಮುಖಂಡರಾದ ಬಿ .ವೀರಣ್ಣನವರು  ರಾಜ್ಯದ ಜನತೆ ಮತ್ತು ಎಲ್ಲಾ ಕಾರ್ಯಕರ್ತರ ಆಶೀರ್ವಾದದೊಂದಿಗೆ  ಬಡವರು ದೀನ ದಲಿತರ ಹಾಗೂ ಅಲ್ಪಸಂಖ್ಯಾತರ ಆಹಿಂದ ಮುಖ್ಯಮಂತ್ರಿಯಾದ ಶ್ರೀ ಸಿದ್ದರಾಮಯ್ಯ ರವರು  135 ಸೀಟುಗಳನ್ನು ಪಡೆಯುವುದರ ಮುಖಾಂತರ ಮತ್ತೊಮ್ಮೆ ಎರಡನೇ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ  ದಾವಣಗೆರೆಗೆ ಯ ಮದಕರಿ ನಾಯಕ ಸರ್ಕಲ್ ಹಾಗೂ ನಗರ ದೇವತೆ ಶ್ರೀ ದುರ್ಗಮ್ಮನ ದೇವಸ್ಥಾನದ ಶಕ್ತಿ ಕೇಂದ್ರದ ಸ್ಥಳವಾದ  ಮದಕರಿ ನಾಯಕ( ಹೊಂಡದ ) ವೃತ್ತದಲ್ಲಿ. ಸರ್ವಧರ್ಮ ಸಾಮೂಹಿಕ ವಿವಾಹ   ಏರ್ಪಡಿಸಿದ ಸಂದರ್ಭದಲ್ಲಿ ಆಗಮಿಸಿದ ಸಂದರ್ಭದಲ್ಲಿ ದೇವರ ಆಶೀರ್ವಾದ ಹಾಗೂ ದಾವಣಗೆರೆ ಜನತೆಯ ಹಾಗೂ ಕರ್ನಾಟಕ ಜನತೆಯ ಆಶೀರ್ವಾದದೊಂದಿಗೆ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದರು ನಂತರ ಎರಡೇ ಬಾರಿಗೆ  2022 ಡಿಸೇಂಬರ್ ರಲ್ಲಿ ದಾವಣಗೆರೆಯಲ್ಲಿ ನಡೆದ ಸಾಮೂಹಿಕ ವಿವಾಹ ಕ್ಕೆ ಆಗಮಿಸ ದ ಸಂದರ್ಭದಲ್ಲಿ ನೀವು ಮತ್ತೊಮ್ಮೆ ಎರಡನೇ ಬಾರಿಗೆ ಮುಖ್ಯಮಂತ್ರಿ ಯಾಗಬೇಕೆಂದು ಹೇಳಿದ್ದರು  ಆದ್ದರಿಂದ ಈ ಈ ಬಾರಿಯ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷವು 135 ಸೀಟುಗಳನ್ನು ಪಡೆಯುವುದು ಮುಖಾಂತರ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು  ಮತ್ತೊಮ್ಮೆ ಎರಡನೇ ಬಾರಿ ಶ್ರೀ ಸಿದ್ದರಾಮಯ್ಯ ರವರು ಮುಖ್ಯಮಂತ್ರಿ ಆಗಿ ಅಧಿಕಾರವನ್ನು ಸ್ವೀಕರಿಸಿಕೊಳ್ಳುತ್ತಿದ್ದಾರೆ ಅವರಿಗೆ ದಾವಣಗೆರೆ ಜನತೆ ಹಾಗೂ ಕರ್ನಾಟಕ ಜನತೆಯ ಪರವಾಗಿ ಅಭಿನಂದನೆಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿ. ವೀರಣ್ಣ, ವಾರ್ಡ್ ಅಧ್ಯಕ್ಷ ಡಿಶ್ ಮಂಜುನಾಥ್, ಸೊಸೈಟಿ ಮಂಜುನಾಥ್, ಆರ್ ಗೋವಿಂದ, ಹೆಚ್.ಕೆ ಮುಶ್ರಫ, ಸಿಲಿಂಡರ್ ಗಣೇಶ್, ಅಪ್ಪಿ.ಬಿ.ವಿ ಪ್ರಮೋದ್ ಕುಮಾರ್, ಪರಶುರಾಮ್  ಹಾಗೂ ಇನ್ನು ಮುಂತಾದವರು ಇದ್ದರು