ದಾವಣಗೆರೆಯಲ್ಲಿವಿಶ್ವ ತಂಬಾಕು ರಹಿತ ದಿನಾಚರಣೆ

ದಾವಣಗೆರೆ ಜೂ.3; ವಿಶ್ವ ತಂಬಾಕು ರಹಿತ ದಿನಾಚರಣೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಘೋಷಿಸಿರುವ ವಾಕ್ಯ “ತಂಬಾಕು ತ್ಯಜಿಸಲು ಬದ್ಧರಾಗಿರಿ” ಎಂಬ ವಿಷಯದ ಕುರಿತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿ.ಜಿ.ಆಸ್ಪತ್ರೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ನಗರದ ಸಿ.ಜಿ ಆಸ್ಪತ್ರೆಯಲ್ಲಿ ತಂಬಾಕು ಮುಕ್ತ ಸಮಾಜ ವಿಷಯದ ಕುರಿತು ಪೋಸ್ಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸಲಾಯಿತು.ರಾಷ್ಟೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ವರದಿ ಪ್ರಕಾರ ಕರ್ನಾಟಕದಲ್ಲಿ ಶೇ.8.5 ರಷ್ಟು ಮಹಿಳೆಯರು ಮತ್ತು ಶೇ.27 ರಷ್ಟು ಪುರುಷರು ತಂಬಾಕು ಸೇವನೆ ಮಾಡುತ್ತಿದ್ದಾರೆ ಜಿಎಟಿಎಸ್ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಶೇ.22.8% ವಯಸ್ಕರು ತಂಬಾಕು ಸೇವನೆ ಮಾಡುತ್ತಿದ್ದಾರೆ ಹಾಗೂ ಶೇಕಡಾ 25.2 ರಷ್ಟು ಮನೆಯಲ್ಲಿಯೇ ವಯಸ್ಕರು ಪರೋಕ್ಷ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ. ತಂಬಾಕು ವ್ಯಸನಿಗಳು ಈ ಅಂಕಿ-ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಂಬಾಕು ಮುಕ್ತ ಮನೆ, ಗ್ರಾಮ, ಸಮಾಜವನ್ನಾಗಿ ನಿರ್ಮಾಣ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಡಾ. ನಾಗರಾಜ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.ಡಾ. ಜಯಪ್ರಕಾಶ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಸಿ.ಜಿ.ಆಸ್ಪತ್ರೆ ಇವರು ಮತಾನಾಡಿ ಪ್ರತಿ ವರ್ಷ ತಂಬಾಕು ಸೇವನೆಯಿಂದ ಜಗತ್ತಿನಾದ್ಯಾಂತ ತಂಬಾಕು 80 ಲಕ್ಷ ಜನರನ್ನು ಕೊಲ್ಲುತ್ತದೆ. ಅದರಲ್ಲಿ 70 ಲಕ್ಷ ಸಾವುಗಳು ತಂಬಾಕಿನ ನೇರ ಬಳಕೆಯಿಂದ ಸಂಭವಿಸುತ್ತದೆ. ಸುಮಾರು 10 ಲಕ್ಷ ಜನ ಪರೋಕ್ಷ ಧೂಮಪಾನದಿಂದ ಸಾವನ್ನಪ್ಪುತ್ತಿದ್ದಾರೆ. ಆದಕಾರಣ ವಿಶ್ವ ಆರೋಗ್ಯ ಸಂಸ್ಥೆಯ ಘೋಷಿಸಿರುವ ಘೋಷಣೆಯಂತೆ ತಂಬಾಕು ತ್ಯಜಿಸಲು ಬದ್ದರಾಗಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಮುರುಳಿಧರ್, ನೋಡಲ್ ಅಧಿಕಾರಿ ಡಾ. ಮುನಾವರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ- ಡಾ. ಸುರೇಶ್ ಬಾರ್ಕಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರು ಎಂ.ವಿ.ಹೊರಕೇರಿ, ಡಾ. ನಂದಿನಿ, ಲೋಕೇಶ್, ಉಮಾಪತಿ, ಸತೀಶ ಕಲಹಾಳ, ದೇವರಾಜ್ ಕೆ.ಪಿ ಇತರರಿದ್ದರು.