
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೯: ದಾವಣಗೆರೆಗೆ ೨೦೧೬-೧೭ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ತಂದವರು ಕಾಂಗ್ರೆಸ್‌ನವರು. ಬಿಜೆಪಿ ಯವರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಸ್ಮಾರ್ಟ್‌ಸಿಟಿ ಯೋಜನೆ ತಂದವರು ಅದನ್ನು ಬಿಟ್ಟು ನಾವು ತಂದಿದ್ದೇವೆ ಎನ್ನುವವರಿಗೆ ನಾಚಿಕೆ ಆಗಬೇಕು. ಆಗ ದಾವಣಗೆರೆ ಮೂರನೇ ಸ್ಥಾನದಲ್ಲಿತ್ತು. ಈಗ ಎಲ್ಲಿದೆ. ಈಗ ಊರನ್ನೆಲ್ಲ ಹಾಳು ಮಾಡಿದ್ದಾರೆ ಎಂದು ಹರಿಹಾಯ್ದರು.ಅವರು ದಾವಣಗೆರೆಗೆ ಬಂದಿರುವುದೇ ದುಡ್ಡು ತಿನ್ನಲಿಕ್ಕೆ ಮತ್ತು ದುಡ್ಡು ಮಾಡಿಕೊಂಡು ಹೋಗಲಿಕ್ಕೆ. ಆಗ ಅವರದ್ದೇ ಎಲ್ಲವೂ ನಡೆಯುತ್ತಿತ್ತು. ಈಗ ನನಗೇನು ಸಂಬಂಧ ಇಲ್ಲ ಎಂದು ರವೀಂದ್ರನಾಥ್ ಮೇಲೆ ಹಾಕು ತ್ತಿದ್ದಾರೆ. ಅದೇನೋ ಮೊಸರನ್ನ ತಿಂದು ಮೇಕೆಗೆ… ಒರೆಸಿದರು ಎನ್ನುವಂತೆ ಆಗಿದೆ ಎಂದರು.ರವೀಂದ್ರನಾಥ್ ನನಗೆ ಹಳೆಯ ಪರಿಚಯ. ಸಂಬಂಧಿಕರು. ರವೀಂದ್ರನಾಥ್ ನನಗೆ ಅಣ್ಣ ಆಗಬೇಕು. ಅವರು ಚೌಕಿಪೇಟೆಯಲ್ಲಿ ಅಂಗಡಿ ಇಟ್ಟಿದ್ದಾಗ ನಾವೂ ಅವರ ಅಂಗಡಿಗೆ ಹೋಗುತ್ತಿದ್ದೆವು. ಅವರು ಒಬ್ಬರೇ ಹೋರಾಟ ಮಾಡಿಕೊಂಡು ಬರುತ್ತಿದ್ದರು. ಆಗನಿಂದಲೂ ಅವರನ್ನು ನಾನು ಬಲ್ಲೆ.ಸಿದ್ದೇಶ್ವರ್ ಅವರು ಸಂಬಂಧಿಕರು. ಆದರೆ, ರವೀಂದ್ರನಾಥ್‌ಗೂ ಅವರಿಗೂ ಬಹಳ ವ್ಯತ್ಯಾಸ ಇದೆ. ರವೀಂದ್ರ ನಾಥ್ ಅವರಂತೆ ಅವರು ಅಲ್ಲ. ಆದರೂ, ನಾನು ರವೀಂದ್ರನಾಥ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರಂತೆ. ಯಾವ ಹೊಂದಾಣಿಕೆಯೂ ಇಲ್ಲ ಎಂದು ತಿಳಿಸಿದರು.ಸ್ಮಾರ್ಟ್‌ಸಿಟಿ ಯೋಜನೆಯಡಿ ಇವರು, ಮಾಜಿ ಸಚಿವರು ಏನೇನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಎಲ್ಲ ದುಡ್ಡನ್ನು ಅವರ ಕಾಲೇಜು, ರಸ್ತೆಗೆ ಹಾಕಿಸಿಕೊಂಡಿರಬೇಕು. ಕೊರೊನಾದಲ್ಲೂ ಏನೇನು ಮಾಡಿದ್ದಾರೋ ಗೊತ್ತಿಲ್ಲ. ಎಲ್ಲ ತಿಂದು, ತೇಗಿ ಎಲ್ಲ ಮಾಡಿ ಈಗ ರವೀಂದ್ರನಾಥ್, ರೇಣುಕಾಚಾರ್ಯ, ಮಾಡಾಳ್ ವಿರುಪಾಕ್ಷಪ್ಪ ಮೇಲೆ ಹಾಕುತ್ತಿ ದ್ದಾರೆ. ನಾನು ಏನೂ ಮಾಡಿಲ್ಲ ಎಂದು ಬಂದು ಆಣೆ-ಪ್ರಮಾಣ ಮಾಡಲಿ ಎಂದು ನೇರವಾಗಿ ಸವಾಲು ಹಾಕಿದರು.ರೇಣುಕಾಚಾರ್ಯ ಇದೇ ಮೊದಲ ಬಾರಿಗೆ ನನ್ನನ್ನು ಮಾತನಾಡಿಸಿದ್ದು. ಮನೆಗೆ ಬಂದವರನ್ನ ಬರಬೇಡ ಎಂದು ಹೇಳಲಿಕ್ಕಾಗದು. ಅವರ ಪಕ್ಷದಲ್ಲಿ ಏನೇನೂ ಇದೆಯೋ ನನಗೆ ಗೊತ್ತಿಲ್ಲ. ನನ್ನ ಜೊತೆ ಯಾವ ಮಾಜಿ ಶಾಸಕರು ಸಹ ಸಂಪರ್ಕದಲ್ಲಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಅವಽಗಿಂತ ಮುಂಚೆಯೇ ಲೋಕಸಭಾ ಚುನಾವಣೆ ಆಗುತ್ತದೆ ಎಂದು ಹೇಳಲಿಕ್ಕೆ ನಾನೇನು ಭವಿಷ್ಯ ಹೇಳುವವ ಅಲ್ಲ. ಮಮತಾ ಬ್ಯಾನರ್ಜಿ ಅವರು ಆ ರೀತಿ ಹೇಳಿದ್ದಾರೆ. ಅವರ ಆಂತರಿಕ ವಿಚಾರ ಏನಿರುತ್ತದೆಯೋ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.