ದಾವಣಗೆರೆತ್ತ ಆಗಮಿಸುತ್ತಿದ್ದಾರೆ ಬೆಂಗಳೂರಿನ ಸೋಂಕಿತರು

ದಾವಣಗೆರೆ. ಏ.೨೬; ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತಿದೆ.ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ಸಿಗದ ಹಿನ್ನಲೆಯಲ್ಲಿ ಸೋಂಕಿತರು ಅದರಲ್ಲೂ ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಯವರು ನಗರಕ್ಕೆ ಆಗಮಿಸುತ್ತಿದ್ದಾರೆ. ದಾವಣಗೆರೆಯ ಕೆಲ ಆಸ್ಪತ್ರೆಗೆ ಚಿಕಿತ್ಸೆಗೆ  ಸೋಂಕಿತರು ದಾಖಲಾಗುತ್ತಿದ್ದಾರೆ.ದಾವಣಗೆರೆ ಜಿಲ್ಲಾಸ್ಪತ್ರೆ, ಎಸ್ ಎಸ್ ಹೈಟೆಕ್ ಆಸ್ಪತ್ರೆ, ಬಾಪುಜಿ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯಲ್ಲಿಸೋಂಕಿತರು ದಾಖಲಾಗಿದ್ದಾರೆ.ಬೆಂಗಳೂರಿನಲ್ಲಿ 
ಆಕ್ಸಿಜನ್ ಬೆಡ್ ಸಿಗದೆ ಇರೋ ಕಾರಣದಿಂದಾಗಿ ದಾವಣಗೆರೆಯತ್ತ ಧಾವಿಸುತ್ತಿದ್ದಾರೆ ಇದರಿಂದಾಗಿ ದಾವಣಗೆರೆಯಲ್ಲಿಯೂ ಬೆಡ್ ಸಿಗದ ಪರಿಸ್ಥಿತಿ ಉಂಟಾಗುವ ಸ್ಥಿತಿ ಎದುರಾಗುತ್ತಿದೆ.  ತಮ್ಮ ಸಂಬಂಧಿಕರ, ಪರಿಚಯಸ್ಥರ ಮೂಲಕ ಮಾಹಿತಿ ಪಡೆದು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.ಇದರಿಂದಾಗಿಜಿಲ್ಲಾಡಳಿತ ಎಚ್ಚರಿಕೆ ಅನುಸರಿಸಬೇಕಾಗಿದೆ.
ಸೋಂಕಿತರ ಟ್ರಾವೇಲ್ ಹಿಸ್ಟರಿ, ಪ್ರಾಥಮಿಕ, ದ್ವೀತಿಯ ಸಂಪರ್ಕ ಹೊಂದಿದವರ ಪತ್ತೆ ಹೇಗೆ.ಜಿಲ್ಲೆಯಲ್ಲಿರುವ ಸೋಂಕಿತರಿಗೆ ಆರೋಗ್ಯ ಸೇವೆ ನೀಡುವುದು ಸವಾಲಾದಂತಿದೆ.
ಬೇರೆ ಜಿಲ್ಲೆಗಳಿಂದ ಬಂದವರ ಮಾಹಿತಿ ಕೊಡುವಂತೆ ಆರೋಗ್ಯ ಇಲಾಖೆ  ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇದೇ ವೇಳೆ ಕೋವಿಡ್ ಸಮಯದಲ್ಲಿ  ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ದರ ವಿಧಿಸಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.ದಿನಕ್ಕೆ ೧೫ ಸಾವಿರ ನೀಡುವಂತೆ ಖಾಸಗಿ ಆಸ್ಪತ್ರೆ ಡಿಮ್ಯಾಂಡ್ ಮಾಡುತ್ತಿವೆ.
ಕೆಲ ಖಾಸಗಿ ಆಸ್ಪತ್ರೆಯ ಹಣದಾಹಕ್ಕೆ ರೋಗಿಯೊಬ್ಬರು  ವಾಪಸ್ ತೆರಳಿದ್ದಾರೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ವೃದ್ದೆ ಅನುಸೂಯಮ್ಮ ದಾವಣಗೆರೆಗೆ ಬಂದಿದ್ದರು.ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಿದಂದ ಬಂದಿದ್ದ ವೃದ್ದೆಗೆ ಕೊರೊನಾ ನೆಗೆಟಿವ್ ಬಂದಿದ್ದರು ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ದಾಖಲು ಮಾಡಿಕೊಂಡಿಲ್ಲ .ಅಲ್ಲದೇ ಬೆಡ್ ಇಲ್ಲ ಎಂದು ಹೇಳಿದ್ದಾರೆ.ಕುಟುಂಬದವರು ಮನವಿ ಮಾಡಿಕೊಂಡ‌ ನಂತರ ಮತ್ತೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಿ ದಾಖಲಿಸಿಕೊಳ್ಳೊದಾಗಿ ಮಾಹಿತಿ ನೀಡಿದ್ದಾರೆ ಅಲ್ಲದೇ  ದಿನಕ್ಕೆ ೧೫ ಸಾವಿರ ರೂ ಬಿಲ್ ಆಗುತ್ತೆ ಮುಂಗಡ ಹಣ ಪಾವತಿ ಮಾಡುವಂತೆ ಸೂಚನೆ ನೀಡಿದ್ದಾರೆ. ಇದರಿಂದ  ಅಜ್ಜಿಯನ್ನ ಆಕೆಯ ಮೊಮ್ಮಗ ಶಿವರಾಜ್ವಾಪಸ್ ಊರಿಗೆ ಕರೆದುಕೊಂಡು ಹೊಗಿದ್ದಾರೆ.ಜಿಲ್ಲಾಡಳಿತದ ಸೂಚನೆಯ ನಂತರವೂ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ವಿನ ಹಣ ಪಡೆದುಕೊಳ್ಳಲಾಗುತ್ತಿದೆ ಈ ಬಗ್ಗೆ ಜಿಲ್ಲಾಧಿಕಾರಿ ಗಳು ಕಠಿಣ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.