ದಾಳಿಗೆ ಯುವತಿ ಕಾರಣ : ನಾಗೇಶ್

ಬೆಂಗಳೂರು,ಮೇ.೧೪-ಆಸಿಡ್ ದಾಳಿ ನಡೆಸುವ ಉದ್ದೇಶ ನನಗಿರಲಿಲ್ಲ. ಆದರೆ ಯುವತಿಯು ನನ್ನ ತಂದೆ ಹಾಗೂ ಅಣ್ಣನಿಗೆ ದೂರು ಹೇಳಿದ್ದರಿಂದ ದಾಳಿ ನಡೆಸಬೇಕಾಯಿತು ಎಂದು ಆರೋಪಿ ನಾಗೇಶ್ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಆಸಿಡ್ ದಾಳಿ ನಡೆಸಲು ಯುವತಿಯೇ ಕಾರಣವಾಗಿದ್ದು,ನಾನು ಪ್ರೀತಿಸಿ ಹಿಂದೆ ಬಿದ್ದಿರುವ ವಿಷಯವನ್ನು ನನ್ನ ತಂದೆ ಹಾಗೂ ಅಣ್ಣನಿಗೆ ತಿಳಿಸಿ ಬೈಯಲು ಕಾರಣವಾಗಿದ್ದರಿಂದ ಆಕ್ರೋಶಗೊಂಡು ಕೃತ್ಯ ನಡೆಸಿದೆ ಎಂದು ಹೇಳಿದ್ದಾನೆ.
ಯುವತಿ ಮೇಲೆ ಆಸಿಡ್ ಹಾಕಬಾರದೆಂದು ಯೋಚಿಸಿದ್ದೆ. ಘಟನೆ ಹಿಂದಿನ ದಿನ ಆಸಿಡ್ ಹಾಕುವೆ ಎಂದು ಹೆದರಿಸಿದ್ದೆ. ಆದರೆ ಯುವತಿಯು ಈ ವಿಷಯವನ್ನು ತನ್ನ ತಂದೆ ಬಳಿ ಹೇಳಿದ್ದಳು.
ಅದು ನನ್ನ ಅಣ್ಣನಿಗೆ ಗೊತ್ತಾಗಿ ಆತ ಯುವತಿಯಿಂದ ವಿಷಯ ತಿಳಿದುಕೊಂಡು ನನಗೆ ಸಾಕಷ್ಟು ಬೈದಿದ್ದ. ಇದರಿಂದ ಆಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿದೆ ಎಂದು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಆತ್ಮಹತ್ಯೆ ಯತ್ನ:
ಕೃತ್ಯದ ಬಳಿಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿ ನಂತರ ಮನಸ್ಸು ಬದಲಿಸಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದಿದೆ.
ಆ?ಯಸಿಡ್ ಎರಚಿದ ಕೋರ್ಟ್ ಬಳಿ ಬಂದು ಜಾಮೀನು ಯತ್ನ ನಡೆಸಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಅಲ್ಲಿಯೇ ಬೈಕ್ ಬಿಟ್ಟು ಆಟೋ ಹತ್ತಿದ್ದಾಗಿ ನಾಗೇಶ್ ಹೇಳಿದ್ದಾನೆ. ಹೊಸಕೋಟೆವರೆಗೂ ಆಟೋದಲ್ಲಿ ತೆರಳಿ. ಅಲ್ಲಿ ಒಂದು ಕೆರೆ ಕಂಡು ಹಾರಿ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದುಕೊಂಡಿದ್ದೆ ಆದರೆ ಬೇಡ ತಿರುಪತಿಗೆ ಹೋಗೋಣ ಎಂದು ಮಾಲೂರು ಬಸ್ ಹತ್ತಿದ್ದೆ.
ತಿರುಪತಿ ಬೇಡ ಎಂದನಿಸಿ ಮಾರ್ಗ ಮಧ್ಯೆ ಇಳಿದು ಕೃಷ್ಣಗಿರಿ ಬಸ್ ಹತ್ತಿ ತಿರುವಣ್ಣಾಮಲೈಗೆ ಹೋಗಿ ರಮಣಾಶ್ರಮದಲ್ಲಿ ಉಳಿದುಕೊಂಡೆ ಎಂದಿದ್ದಾನೆ.
.