ದಾಳಿಂಬೆ ಬೆಳೆಯಲು ರೋಗರಹಿತ ಉತ್ತಮ ಸಸಿ ನಾಟಿ ಮಾಡಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಆ.01 ತೋಟಗಾರಿಕಾ ಹಾಗೂ ವಾಣಿಜ್ಯ ಬೆಳೆಯಾದ ದಾಳಿಂಬೆ ಬೆಳೆಯಲು ತಾಲೂಕಿನಲ್ಲಿ ಸೂಕ್ತ ಮಣ್ಣು ಮತ್ತು ಹವಾಗುಣ ಇದ್ದು ರೈತರು ನಾಟಿ ಮಾಡಲು ರೋಗ ರಹಿತವಾದ ಉತ್ತಮ ಸಸಿಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಬೆಂಗಳೂರಿನ  ಸೈಂಟಿಪಿಕ್ ಆಗ್ರೋ ಟೆಕ್ನಾಲಜಿಸ್‍ನ ವಿಜ್ಞಾನಿ ಡಾ.ಸುನೀಲ್ ತಾಮಗಾಳೆ ತಿಳಿಸಿದರು.
ಪಟ್ಟಣದ ಮಹಾವೀರ ಟ್ರೇಡರ್ಸ್ ಸಹಯೋಗದಲ್ಲಿ ಶುಕ್ರವಾರ ಗುರುಭವನದಲ್ಲಿ ಆಯೋಜಿಸಿದ್ದ ದಾಳಿಂಬೆ ಬೆಳೆ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಾಳಿಂಬೆ ಬೆಳೆ ರೈತರಿಗೆ ಉತ್ತಮ ಆದಾಯ ಕೊಡುವ ಬೆಳೆಯಾಗಿದ್ದು ಸಸಿ ನಾಟಿ ಮಾಡುವದರಿಂದ ಹಿಡಿದು ಹಣ್ಣು ಕೊಯ್ಲಿಗೆ ಬರುವವರೆಗೂ ಮಗುವಿನ ಜೋಪಾನ ಮಾಡುವಂತೆ ಬಹಳ ಜಾಗ್ರತೆಯಿಂದ ಬೆಳೆಸಬೇಕು, ಇದಕ್ಕೆ ಪ್ರಥಮವಾಗಿ ರೈತರು ಈ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು ಅವಶ್ಯಕ ಯಾರೋ ಒಬ್ಬ ರೈತರು ಲಕ್ಷ ಕೋಟಿ ಸಂಪಾದನೆ ಮಾಡಿದ್ದಾರೆ ಎಂದು ನಾವೂ ಬೆಳೆ ಹಾಕಬೇಕು ಅನ್ನುವ ಮನೋಭಾವ ಬೇಡ, ಬದಲಾಗಿ ಅವರು ಯಾವ ರೀತಿ ಕೃಷಿ ಕೈಗೊಂಡಿದ್ದಾರೆ, ಸಸಿಗಳ ಆಯ್ಕೆ, ಬೆಳೆಯುವ ವಿಧಾನ ಈ ಬೆಳೆಗೆ ಬರುವ ರೋಗಗಳ ಹಾಗೂ ಕೀಟ ಬಾಧೆಗಳು, ಇದರ ನಿಯಂತ್ರಣ, ಚಾಟ್ನಿ ಪದ್ದತಿ, ಹಾಗೂ ಸಮತೋಲನ ಗೊಬ್ಬರಗಳ ಹಾಕುವಿಕೆ ನೀರಿನ ನಿರ್ವಹಣೆ ಬೆಳೆ ಕೈಗೆ ಬರುವವರಗೂ ಇದಕ್ಕೆ ತಗಲುವ ವೆಚ್ಚ ಸೇರಿದಂತೆ ಇನ್ನಿತರ ಎಲ್ಲಾ ಮಾಹಿತಿ ಪಡೆದ ನಂತರವಷ್ಟೆ ದಾಳಿಂಬೆ ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ದಾಳಿಂಬೆಯ ಮೂಲ ಕೃಷಿ ಪದ್ದತಿ, ದಾಳಿಂಬೆ ಗಿಡದಲ್ಲಿ ಹೂವಿನ ಪ್ರಾರಂಭ ಮತ್ತು ಸೆಟ್ಟಿಂಗ್ ಮಾಡುವ ಪ್ರಕ್ರಿಯೆ, ರೋಗಗಳ ಮತ್ತು ಅದರ ನಿರ್ವಹಣೆ, ಬಹು ಮುಖ್ಯವಾಗಿ ದಾಳಿಂಬೆ ಬೆಳೆಗಾರರಿಗೆ ಕಾಡುವ ಸರ್ಕಸ್ಪೋರ ಎಲೆ ಚುಕ್ಕಿ ರೋಗ, ದುಂಡಾಣು ಅಂಗಮಾರಿ ಮತ್ತು ಸೊರಗು ರೋಗ ಲಕ್ಷಣಗಳು ಮತ್ತು ನಿವಾರೋಣಪಾಯಗಳನ್ನು ಪ್ರೊಜೆಕ್ಟರ್ ಮೂಲಕ ಚಿತ್ರ ಸಮೇತ ವಿವರಿಸಿದರು.
ಈ ಸಂದರ್ಭದಲ್ಲಿ ಮಹಾವೀರ ಟ್ರೇಡರ್ಸ್ ಮಾಲಿಕರಾದ ದಿನೇಶ್ ಧಾರಿವಾ¯ ಸಹೋದರರು,  ದಾಳಂಬೆ ಬೆಳೆಗಾರರಾದ ನೆಲ್ಕುದ್ರಿ ಚಂದ್ರಪ್ಪ, ನಂದಿಬಂಡಿ ಜಗದೀಶ್, ತಂಬ್ರಹಳ್ಳಿ ಉತ್ತರ ಭಾಗದ ಕೊಟಿಗಿ ಪಕ್ಕೀರಜ್ಜ, ಕಿತ್ನೂರು ಜಂಬುನಾಥ, ಹನುಮಂತಪ್ಪ, ತಂಬ್ರಹಳ್ಳಿ ಮಹೇಶ್, ಬನ್ನಿಗೋಳ ಮೂಲಿಮನಿ ರವಿಪ್ರಸಾದ್, ಬಿ.ದೇವಿಪ್ರಸಾದ್, ಮರಿಕೊಟ್ರಪ್ಪ, ಯಡ್ರಾಮನಹಳ್ಳಿ, ಚಿಲುಗೋಡು, ಏಣಿಗಿ ಬಸರಕೋಡು ಕೋಡಿಹಳ್ಳಿ ಸೇರಿದಂತೆ ತಾಲೂಕಿನ ಇತರೆಡೆಗಳಿಂದ 150 ಕ್ಕೂ ಹೆಚ್ಚು ರೈತರು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು.   

Attachments area