ದಾಳಿಂಬೆ ಕೃಷಿ ಕುರಿತು ರೈತರಿಗೆ ವೈಜ್ಞಾನಿಕ ತರಬೇತಿ

ಕಲಬುರಗಿ,ಜೂ.27:ಸೋಲಾಪೂರ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರ ಹಾಗೂ ಕಲಬುರಗಿ ಐಸಿಎಆರ್-ಕೃಷಿ ವಿಜ್ಞಾನಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ರೈತರಿಗೆ ಎಸ್.ಸಿ.ಎಸ್.ಪಿ ಯೋಜನೆಯಡಿ ದಾಳಿಂಬೆ ವೈಜ್ಞಾನಿಕ ಕೃಷಿ ತರಬೇತಿ ಕಾರ್ಯಕ್ರಮವನ್ನು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಯಿತು.

ದಾಳಿಂಬೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಪಿಂಕೆ ರಾಯಗೊಂಡ್, ಡಾ.ಮಲ್ಲಿಕಾರ್ಜುನ ಹರಸೂರ್, ಡಾ.ಶಿಲ್ಪಾ ಪಿ., ಡಾ.ಚಂದ್ರಕಾಂತ, ತಾಂತ್ರಿಕ ಅಧಿಕಾರಿ ಮಹಾದೇವ ಕೆವಿಕೆಯ ವಿಜ್ಞಾನಿಯಾದ ಡಾ.ಯುಸುಫ್‍ಅಲಿ ನಿಂಬರಿಗಿ, ಡಾ.ಜಹೀರ್‍ಅಹೆಮದ್, ಡಾ. ಮಂಜುನಾಥ ಪಾಟೀಲ್ ರೈತರಿಗೆ ದಾಳಿಂಬೆ ಕೃಷಿಗೆ ಸೂಕ್ತ ಮಣ್ಣು, ಸಾವಯವಗೊಬ್ಬರ, ರಸಗೊಬ್ಬರ, ನೀರಾವರಿ ವಿಧಾನ ಮತ್ತುಕೀಟರೋಗದ ಕುರಿತು ಮಾಹಿತಿ ನೀಡಿದರು.

ಕೇಂದ್ರದ ಮುಖ್ಯಸ್ಥರಾದ ಡಾ.ರಾಜು. ಜಿ. ತೆಗ್ಗಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.