ದಾರ್ಶನಿಕರ ಜೀವನ ಚರಿತ್ರೆ ಎಲ್ಲರಿಗೂ ಮಾದರಿ

ಜಗಳೂರು.ಜ.೧೪: ಇಂದಿನ ಯುವ ಸಮುದಾಯಕ್ಕೆ ಸಾಧನೆ ಮಾಡಲಿಕ್ಕೆ ಸಾಕಷ್ಟು ಅವಕಾಶಗಳಿದ್ದು ಸಮರ್ಪಕವಾಗಿ ಬಳಸಿಕೊಂಡು ಗುರಿಯನ್ನು ಮುಟ್ಟಿ ಎಂದು ಎಂದು ಜೆ ಎಂ ಎಫ್ ಸಿ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಧೀಶರಾದ ಜಿ.ತಿಮ್ಮಯ್ಯ ಹೇಳಿದರು.ಪಟ್ಟಣದ ನಾಲಂದ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘ ಹಾಗೂ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕನಾಂದ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶ ವಿಶ್ವದಲ್ಲಿಯೇ ಹೆಚ್ಚು ಯುವ ಕರನ್ನು ಹೊಂದಿರುವಂತ ದೇಶವಾಗಿದ್ದು ದೇಶಕ್ಕಾಗಿ ಕೊಡುಗೆ ನೀಡಿದ ಹಲವಾರು ದಾರ್ಶನಿಕರ ಜೀವನ ಚರಿತ್ರೆಗಳನ್ನು ಆಭ್ಯಾಸಿಸಿ ಅವರಂತೆ ಯುವ ಸಮುದಾಯವ ಆಗಬೇಕು ಎಂದರು .
ಯಾರು ಇತಿಹಾಸವನ್ನು ಅರಿತಿಲ್ಲವೋ ಇತಿಹಾಸ ಸೃಷ್ಟಿಸಲಾರರು ಹಾಗಾಗಿ ನೀವು ಇತಿಹಾಸವನ್ನು ಓದಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.80 ಲಕ್ಷ ಜೀವ ರಾಶಿಗಳಲ್ಲಿ ನಾವು ಮಾನವರಾಗಿ ಜನಿಸಿದವರು ನಮ್ಮ ಪುಣ್ಯವಾಗಿದ್ದು ನೀವು ಸಾಧಕರಾಗಿ ಬದುಕ ನಡೆಸ ಬೇಕಾಗಿದೆ. ವಿವೇಕಾನಂದರು ಮಾಡಿದ ಒಂದು ಭಾಷಣ ವರ ದೇಶದಲ್ಲಿ 250 ರಿಂದ 300 ಕಾರ್ಯಕ್ರಗಳನ್ನು ನೀಡಲು ಅವಕಾಶ ದೊರೆಯಿತು. ತಮಿಳುನಾಡಿನಲ್ಲಿ ಜಲ್ಲಿ ಕಟ್ಟು ಕ್ರೀಡೆಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿತು ಆದರೆ ಯುವ ಸಮುದಾಯವು ಪ್ರತಿಭಟನೆ ಮಾಡಿದ್ದರಿಂದ ಆದೇಶ ರದ್ದಾಯಿತು.ಇದಾರ್ಥ ಯುವ ಸಮುದಾಯಸವರು ಏನಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ ಎಂದರು.ಎಲ್ಲಾರೀತಿಯ ಪುಸ್ತಕಗಳನ್ನು ಓದುವ ಆಭ್ಯಾಸ ಪ್ರತಿಯೋಬ್ಬರು ಕಲಿಯಬೇಕಾಗಿದೆ ಇದರಿಂದ ನಿಮ್ಮ ಜೀವನದ ದಿಕ್ಕೂ ಬದಲಾಗಲಿದೆ .
ವಿದ್ಯಾರ್ಥಿ ಜೀವನಾವು ಮಹತ್ತರ ಘಟ್ವಾವಾಗಿದ್ದು ಕಲಿಕೆಯ ಕಡೆಗೆ ಆದ್ಯತೆ ನೀಡ ಬೇಕಾಗಿದೆ .ಕಾನೂನು ಧರ್ಮ ತಳಹಾದಿಯ ಮೇಲೆ ನಿಂತಿದೆ ಕಾನೂನು ಇರುವುದು ಪ್ರತಿಯೋಬ್ಬರ ರಕ್ಷಣೆ ಮಾಡುವುದಕ್ಕಾಗಿ ಅದನ್ನು ಎಲ್ಲಾರೂ ಪಾಲಿಸಬೇಕು ಎಂದು ಹೇಳಿದರು. ಪ್ರಾಂಶುಪಾಲರಾದ ಸಿ.ತಿಪ್ಪೇಸ್ವಾಮಿ ಮಾತನಾಡಿ 1863 ಜ.12 ಕಲ್ಕತ್ತ ನಗರದಲ್ಲಿ ಜನಿಸಿದ ಇವರು ವಿಶ್ವಕ್ಕೆ ಬೆಳಕಾದವರು.ಹೇಳಿ ಎದ್ದೇಳಿ ಗುರಿಮುಟ್ಟುವ ತನಕ ಮಲಗ ಬೇಡಿ ಎಂದು ಯುವ ಸಮುದಾಯವನ್ನು ಬಡಿದೆಬ್ಬಿಸಿದರು ,ಭಾರತದ ಚರಿತ್ರೆಯಲ್ಲಿ ಅಪಾರ ರಾಷ್ಟç ಭಕ್ತಿಯನ್ನು ಹೊಂದಿದ ದರ್ಶಾನಿಕರು ಸಾಲಿನಲ್ಲಿ ಇವರು ನಿಲ್ಲುತ್ತಾರೆ.ಭಾರತದ ಕೀರ್ತಿ ಯನ್ಮು ವಿಶ್ವಕ್ಕೆ ತಿಳಿಯುವಂತೆ ಮಾಡಿದರು ಇವರ ಚಿಂತನೆಗಳು ನಮಗೆ ಆದರ್ಶವಾಗಿವೆ .  ಎಂದರು.ಈ ಸಂಧರ್ಭದಲ್ಲಿ ಕಾರ್ಯದರ್ಶಿ ತಿಪ್ಪೇಸ್ವಾಮಿ, ವಕೀಲರುಗಳಾದ ಪರಮೇಶ್ವರಪ್ಪ, ರುದ್ರೇಶ್, ಉಮಾಪತಿ, ಹನುಮಂತಪ್ಪ, ವರಿಣ್,ಜ್ಯೋತಿ, ಓಂಕಾರಪ್ಪ, ಉಪನ್ಯಾಸಕರಾದ ನಿಂಗಪ್ಪ, ಪರಮೇಶ್ವರಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.Attachments area