ದಾರಿ ಸಮಸ್ಯೆ ಇತ್ಯರ್ಥ ಪಡಿಸಲು ಉಸ್ತುವಾರಿ ಸಚಿವರಿಗೆ ತರಾಟೆಗೆ ತೆಗೆದುಕೊಂಡ ರೈತ ಮುಖಂಡ ಅರವಿಂದ ಕುಲಕರ್ಣಿ

ವಿಜಯಪುರ, ಜೂ.10-ಕಳೆದ 6 ವರ್ಷಗಳಿಂದ ವರ್ಷಗಳಿಂದ ರೈತರ ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿದರು.
ರೈತರ ಸಮಸ್ಯೆ ಬಗೆಹರಿಸಿದ್ದಲ್ಲಿ ಸರ್ಕಾರ ಸರ್ಕಾರ ನಡೆಸುತ್ತಿರುವುದು ಯಾತಕ್ಕೆ… ದಿನ ನಿತ್ಯವು ರೈತರು ಹಳ್ಳಿಗಳಲ್ಲಿ ದಾರಿ ಸಮಸ್ಯೆ ಕುರಿತಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಮತ್ತು ಕೊಲೆಗಳಾಗುತ್ತಿವೆ. ಇಷ್ಟಿದ್ದರೂ ಸರ್ಕಾರದ ಗಮನಕ್ಕೆ ಬಂದಿಲ್ಲವೇ ಹೇಗೆ? ರೈತರ ಇಂತಹ ಗಂಭೀರ ಸಮಸ್ಯೆಯನ್ನು ಬಗೆ ಹರಿಸದೆ ಇದ್ದಲ್ಲಿ ಸರ್ಕಾರ ಯಾತಕ್ಕೆ ಎಂದು ಖಂಡಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ರೈತ ಮುಖಂಡ ಅರವಿಂದ ಕುಲಕರ್ಣಿ ಅವರು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಧ್ಯ ಪ್ರವೇಶಿಸಿ ದಿನ ನಿತ್ಯ ರೈತರು ಕಛೇರಿಗೆ ಅಲೆದಾಡುತ್ತಾರೆ. ಹಳ್ಳಿಗಳಲ್ಲಿ ದಾರಿ ಸಮಸ್ಯೆ ತೀವ್ರತೆ ಪಡೆಯುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.
ಇದೇ ವೇಳೆ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲು ಸೂಕ್ತ ವಹಿವಾಟು ದಾರಿ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚಿಗೆ ಹಳ್ಳಿಗಳಲ್ಲಿ ವಹಿವಾಟು ದಾರಿಗಾಗಿ ರೈತರು ತಕರಾರು ತಗೆಯುತ್ತಿದ್ದಾರೆ. ನಕ್ಷೆಯಲ್ಲಿ ದಾರಿ ಗುರುತು ಇದ್ದರೆ ಮಾತ್ರ ಹಾಯ್ದು ಹೋಗಲು ಅವಕಾಶ ಕೊಡುತ್ತಾರೆ. ಇಲ್ಲದಿದ್ದರೆ ಅವಕಾಶ ಕೊಡುವುದಿಲ್ಲ. ರೈತರು ಬೆಳೆದ ಉತ್ಪನ್ನಗಳನ್ನು ತಗೆದುಕೊಂಡು ಬರಲು ಮತ್ತು ದಾರಿ ಇಲ್ಲದೇ ಉಳುಮೆ ಮಾಡಲು ಆಗುತ್ತಿಲ್ಲ. ಇದರಿಂದ ಜಮೀನುಗಳು ಬೀಳು ಬೀಳುತ್ತಿವೆ. ಇಂತಹ ದಾರಿ ಸಮಸ್ಯೆ ಇರುವ ರೈತ ಕುಟುಂಬಗಳಿಗೆ ವ್ಯವಸಾಯ ಮಾಡದೇ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ ಎಂದರು.
ಕರ್ನಾಟಕ ಭೂಕಂದಾಯ ಅಧಿನಿಯಮ 1964 ಅಡಿಯಲ್ಲಿ ರಚಿತವಾಗಿರುವ ಕಾನೂನಿನಲ್ಲಿ ಕಂದಾಯ ಅಧಿಕಾರಿಗಳು ನಿರ್ವಹಿಸಬೇಕಾದ ಕೆಲಸಗಳು ಹಾಗೂ ಇತರೆ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಅಧಿನಿಯಮದ ಅಧ್ಯಾಯ ರಲ್ಲಿ ರೆವೆನ್ಯೂ ಮೋಜಣಿ ಕೋಡ್ ಮತ್ತು ಭೂ ಸಂಪದಗಳ ವಿಭಜನೆ ಕುರಿತು ವಿವರಣೆ ಇರುತ್ತದೆ. ಅಧ್ಯಾಯ 12 ರಲ್ಲಿ ಮೇರೆಗಳು ಮತ್ತು ಮೇರೆಯ ಗುರುತುಗಳ ವಿವರ ಇರುತ್ತದೆ ಎಂದು ಹೇಳಿದರು.
ಸದರಿ ಅಧ್ಯಾಯಗಳ ಅಡಿಯಲ್ಲಿ ಖಾಸಗಿ ಜಮೀನುಗಳಿಗೆ ರೈತರು ತಮ್ಮ ಉತ್ಪನ್ನಗಳನ್ನು ತಗೆದುಕೊಂಡು ಬರಲು ಮತ್ತು ಜಮೀನು ಉಳುಮೆ ಮಾಡಲು ರಸ್ತೆ ಸಂಪರ್ಕ ಕುರಿತು ತಕರಾರು ಬಂದಲ್ಲಿ ಕಂದಾಯ ಇಲಾಖೆ ನಿರ್ವಹಿಸುವ ಪಾತ್ರದ ಕುರಿತು ಎಲ್ಲಿಯೂ ಉಲ್ಲೇಖ ಇರುವುದಿಲ್ಲ. ಈ ಕುರಿತು ಯಾವುದೇ ಕಲಂ ಅಡಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರು ಇವರಿಗೆ ದಾರಿ ಮಾಡಿ ಕೊಡುವ ಅಧಿಕಾರ ಇರುವುದಿಲ್ಲ. ಆದರೆ ಭೂಮಿಯನ್ನು ವಿಭಜನೆ ಮಾಡಿ ಅಳತೆ ಮಾಡುವ ಕಾಲಕ್ಕೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ನಿಯಮ 59ರ ಅಡಿ ಹಿತಾಸಕ್ತರು ಒಪ್ಪಿದಲ್ಲಿ ದಾರಿಯ ಹಕ್ಕು ಮತ್ತು ಇತರೆ ಉಪಯೋಗದ ಹಕ್ಕನ್ನು ದಾಖಲು ಮಾಡುವ ಅವಕಾಶವಿರುತ್ತದೆ ಎಂದರು.
ಸನ್ 1962-63 ನೇ ಸಾಲಿನಲ್ಲಿ ಭೂಮಿಯ ಆಳಕೆ ಹಾಗೂ ಸರ್ವೆ ನಂಬರ ಕುರಿತು ಮಾಡಲಾದ ಸರ್ವೆ ಸೆಟ್ಲಮೆಂಟ್ ಸಂದರ್ಭದಲ್ಲಿ ಆಗಿರುವ ಓಡುವಳ ಅನುಗುಣವಾಗಿ ಚಾಲ್ತಿಯಲ್ಲಿರುವ ರಸ್ತೆಗಳನ್ನು ಮಾತ್ರ ಗ್ರಾಮ ನಕಾಶೆಗಳಲ್ಲಿ ಕಾಣಿಸಿರುತ್ತಾರೆ, ಆದರೆ ತೇರೆ ಜಮೀನುಗಳಿಗೆ ಹೋಗಲು ರಸ್ತೆ ಕುರಿತು ಪ್ರತಿ ಸರ್ವೆ ನಂಬರಗೆ ಅನುಗು ಕಾಣಿಸಿರುವುದಿಲ್ಲ, ಈಗಿನ ಜಮೀನಿನ ಮಾರುಕಟ್ಟೆ ಮೌಲ್ಯ ವೃದ್ಧಿಯಾಗಿರುವುದರಿಂದ ಸುತ್ತು ಜಮೀನುಗಳನ್ನು ನೀರಾವರಿಗೆ ಒಳಪಡಿಸಿ ರೈತರು ಆಧುನಿಕ ಜೀವಾಲಯ ಬೆಳಸಿ ಅಳವಡಿಸಿಕೊಂಡ ನಂತರ ಆಧುನಿಕ iÀುಂತ್ರೋಪಕರಣಗಳನ್ನು ಉಪಯೋಗಿಸಿ ಉಳುಮೆ ಮಾಡುತ್ತಿದ್ದಾಲಿ, ಆದ್ದರಿಂದ ಯಾವ ರೈತರು ತಮ್ಮ ಜಮೀನಿನಲ್ಲಿ ರಸ್ತೆ ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪುತ್ತಿರುವುದಿಲ್ಲ. ಇದರಿಂದ ರಸ್ತೆಯ ಒಳಗಿರುವ ಜಮೀನುಗಳಿಗೆ ಹೋಗಲು ತೀವ್ರ ತೊಂದರೆ ಪಡುತ್ತಿದ್ದಾರೆ, ಇದರಿಂದ ಹಳ್ಳಿಗಳಲ್ಲಿ ರೈತರ ಮಧ್ಯ ದ್ವೇಷದ ವಾತಾವರಣ ಉಂಟಾಗಿ ಹೊಡೆದಾಟ ಬಡಿದಾಟಗಳಾಗುತ್ತಿದೆ. ಕೆಲವೊಂದು ಹಳ್ಳಿಗಳಲ್ಲಿ ಕೊಲೆಗಳಾದ ಉದಾರಣೆಗಳಿವೆ. ಅಲ್ಲದೇ ದಿವಾಣಿ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗಿವೆ. 2002 ನೇ ಸಾಲಿನ ವರೆಗೂ ದಾರಿ ಇಲ್ಲದ ಜಮೀನುಗಳಿಗೆ ದಾರಿ ಮಾಡಿಕೊಡುವ ಅಧಿಕಾರ ಆಯಾ ತಾಲೂಕಿನ ತಹಸೀಲ್ದಾರಗಳಿಗೆ ಇತ್ತು (ಃಚಿsemeಟಿಣ ಂಛಿಣ- ಅನುಭೋಗದಕ್ಕಿನಡಿ) ದಾರಿ ಮಾಡಿ ಕೊಡುತ್ತಿದ್ದರು ಈ ಸಮಸ್ಯೆ ಕೇವಲ ಒಂದು ಹಳ್ಳಿಯ ಸಮಸ್ಯೆಯಾಗಿರದೇ ಇಡೀ ರಾಜ್ಯದ ಸಮಸ್ಯೆಯಾಗಿದೆ ಎಂದರು.
ದಿನನಿತ್ಯ ರೈತರು ತಹಸೀಲ್ದಾರ ಹಾಗೂ ಜಿಲ್ಲಾಧಿಕಾರಿಗಳ ಬಳಿ ಅಲೆದಾಡುತ್ತಿದ್ದಾರೆ. ದಾರಿ ಮಾಡಿ ಕೊಡುವ ಅಧಿಕಾರ ಅವರಿಗೆ ಇಲ್ಲದಿರುವದರಿಂದ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ಭೂಕಂದಾಯ ಅಧಿನಿಯಮಗಳ 1956, ನಿಯಮ 59 ರಲ್ಲಿ ತಿದ್ದುಪಡಿ ಮಾಡಿ ಸಾರ್ವತ್ರಿಕ ಮತ್ತು ಶಾಶ್ವತ ದಾರಿ ಹಕ್ಕನ್ನು ಗಮಣದು ಮಾಡುವ ಕುರಿತು (ಖಿoತಿಟಿ & ಅouಟಿಣಡಿಥಿ Pಟಚಿಟಿಟಿiಟಿg ಂಛಿಣ) ನಲ್ಲಿ ನಗರ ಪ್ರದೇಶಕ್ಕೆ ಮಾಸ್ಟರ್ ಪ್ಲಾನ್ ಮಾಡುವಂತೆ ಗ್ರಾಮೀಣ ಪ್ರದೇಶಕ್ಕೆ ಸಹ ಮೋಡಿ ಮಾಡಲು ರೈತರು ಅರ್ಜಿ ಸಲ್ಲಿಸಿದಾಗ ಖರಾಬ ಕ್ಷೇತ್ರವನ್ನು ವಹಿವಾಟು ರಸ್ತೆ ಎಂದು ನಮೂದಿಸಲು ಸರ್ಕಾರ ಮಟ್ಟದಲ್ಲಿ ಸೂಕ್ತ ಕಾನೂನು ತಿದ್ದುಪಡಿ ಮಾಡಿ ಮೊದಲಿನಂತೆ ದಾರಿ ಮಾಡಿಕೊಡುವ ಅಧಿಕಾರವನ್ನು ತಹಸೀಲ್ದಾರರಿಗೆ ವಹಿಸಿಕೊಡಲು ವಿಶೇಷ ಸಚಿವ ಸಂಪೂಟ ಸಭೆ ಕರೆದು ನಿರ್ಣಯ ತೆಗೆದುಕೊಳ್ಳಬೇಕು ಹಾಗೂ ಇದಕ್ಕೆ ಸಂಬಂಧಪಟ್ಟತೆ ಹಲವಾರು ಭಾರಿ ಮನವಿ ಸಲ್ಲಿಸಿ ವಿವಿಧ ರೀತಿ ಹೋರಾಟ ಮಾಡಲಾಗಿದೆ ಆದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಆದ್ದರಿಂದ ಕೂಡಲೇ ಸರ್ಕಾರ ಕ್ರಮ ಕೈಕೊಳ್ಳಬೇಕೆಂದು ಅಖಂಡ ಕರ್ನಾಟಕ ರೈತ ಸಂWದ ಪದಾಧಿಕಾರಿಗಳು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸದಾಶಿವ ಬರಟಗಿ, ಈರಣ್ಣ ದೇವರಗುಡಿ, ವಿಠ್ಠಲ ಬಿರಾದಾರ, ಚಂದ್ರಾಮ ತೆಗ್ಗಿ, ಸೋಮನಗೌಡ ಪಾಟೀಲ್, ದ್ಯಾಮನಗೌಡ ಪೊಲೇಶಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.