ದಾರಿ ತಪ್ಪಿಸುತ್ತಿರುವ ರೈಲ್ವೆ ಡಿಆರ್‍ಎಂ: ಜನರ ಆಕ್ರೋಶ

ಶಹಾಬಾದ:ನ.19: ಸೋಲಾಪುರ ವಿಭಾಗೀಯ ರೈಲ್ವೆ ಅಧಿಕಾರಿ (ಡಿಆರ್‍ಎಂ) ರೈಲ್ವೆ ಇಲಾಖೆಗೆ, ಜನ ಪ್ರತಿನಿಧಿಗಳಿಗೆ ಸುಳ್ಳು ಮಾಹಿತಿ ನೀಡುತ್ತಿದ್ದು, ದಿಕ್ಕು ತಪ್ಪಿಸುವ ಮೂಲಕ ಸೋಲಾಪುರ ವಿಭಾಗ ವ್ಯಾಪ್ತಿಯ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ನಗರದ ಮುಖಂಡರು ನೇರವಾಗಿ ಆರೋಪಸಿದರು.

ಶಹಾಬಾದ ಅಭಿವೃದ್ದಿ ಹೋರಾಟ ಸಮಿತಿ ವತಿಯಿಂದ ಎಕ್ಸಪ್ರೆಸ್ ರೈಲು ನಿಲುಗಡೆಗೆ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ನ.24 ರಂದು ರೈಲು ತಡೆ ನಡೆಸುವಾಗಿ ಹೇಳಿದ್ದರಿಂದ ರೈಲ್ವೆ ಇಲಾಖೆ ಅಧಿಕಾರಿಗಳು ಡಿವೈಎಸ್‍ಪಿ ಕಚೇರಿಯಲ್ಲಿ ಹೋರಾಟ ಸಮಿತಿ ಮುಖಂಡರೊಂದಿಗೆ ನಡೆಸಿದ ಚರ್ಚೆಯಲ್ಲಿ ಮುಖಂಡರು ಸೋಲಾಪುರ ಡಿಆರ್‍ಎಂ. ಅವರ ಕಾರ್ಯವೈಖರಿ ಕುರಿತು ಆಕ್ರೋಶ ವ್ಯಕ್ತಪಡಿಸಿ ಮಾತನಾಡುತ್ತ, ಕೋವಿಡ-19 ಗಿಂತ ಮುಂಚೆ ಶಹಾಬಾದ ರೈಲು ನಿಲ್ದಾಣದಲ್ಲಿ ನಿಲ್ಲುತ್ತಿದ್ದ ರೈಲುಗಳನ್ನು ನಿಲ್ಲಿಸಲು, ಪ್ಯಾಸೆಂಜರ್ ರೈಲು ಕಲಬುರಗಿ, ಸೋಲಾಪುರದವರೆಗೆ ಓಡಿಸಲು ಜನೇವರಿಯಿಂದ ಮನವಿ ಮಾಡಿಕೊಂಡರು ಕ್ಯಾರೆ ಎನ್ನುತ್ತಿಲ್ಲ ಎಂದು ದೂರಿದರು.
ಶುಕ್ರವಾರದಿಂದ ಎರಡು ಎಕ್ಸಪ್ರೆಸ್ ರೈಲು ಪ್ರಾರಂಭಿಸುವದಾಗಿ ರೈಲ್ವೆ ಇಲಾಖೆ ಹೇಳಿದೆ, ಆದರೆ, ಶಹಾಬಾದ ನಿಲ್ದಾಣದಲ್ಲಿ ಟಿಕೇಟ್ ನೀಡುತ್ತಿಲ್ಲ, ಅದೇ ರೀತಿ ಪ್ಯಾಸೆಂಜ್ (ಡೆಮೋ) ರೈಲು ಪ್ರಾರಂಭಿಸಿದ್ದರು, ಟಿಕೇಟ ನೀಡದೆ ಇದ್ದು, ಮುಂದಿನ ದಿನಗಳಲ್ಲಿ ಶಹಾಬಾದ್‍ದಿಂದ ಯಾವುದೇ ಆರ್ಥಿಕ ಲಾಭ ಇಲ್ಲ ಎಂದು ತೋರಿಸುವ ಮೂಲಕ ಮತ್ತೆ ರೈಲು ನಿಲ್ಲಿಸದೇ ಇರುವದಕ್ಕೆ ದೂರಾಲೋಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಗರದ ರೈಲು ನಿಲ್ದಾಣದಲ್ಲಿ ಹೆಚ್ಚಿನ ಕಾಯ್ದಿರಿಸುವ ಕೋಟಾ ಇಲ್ಲದೆ ಇರುವದರಿಂದ ಸ್ಥಳೀಯರು ಹುಟಗಿ, ದುದನಿ, ಗಾಣಗಾಪುರದಿಂದ ಟಕೇಟ್ ಪಡೆದು, ಶಹಾಬಾದ ನಿಲ್ದಾಣದಿಂದ ರೈಲು ಹತ್ತುತ್ತಾರೆ, ಕೆಲ ರೈಲು ಇಲ್ಲಿ ನಿಲ್ಲದೆ ಇರುವದರಿಂದ ಸೀಸನ್ ಪಾಸ್ ಪಡೆಯುವವರು ಕಲಬುರಗಿಯಿಂದ ವಾಡಿಯವರೆಗೆ ಪಡೆಯುವದರಿಂದ ರೈಲ್ವೆ ಇಲಾಖೆಗೆ ನಗರದಿಂದ ಆದಾಯದ ಲೆಕ್ಕ ನಿಖರವಾಗಿ ಸಿಗುತ್ತಿಲ್ಲ ಎಂದು ಹೇಳಿದರು.
ಸ್ಥಳೀಯ ಶಾಸಕರು ಸೋಲಾಪುರಕ್ಕೆ ಮಾಹಿತಿ ಕೇಳಿದಾಗ ದಿನಕ್ಕೆ ಕೇವಲ 40 ಟಿಕೇಟ್ ಮಾರಾಟವಾಗುತ್ತದೆ ಎಂದು ಮಾಹಿತಿ ನೀಡಿದರೆ, ಮಾಹಿತಿ ಹಕ್ಕು ಅನ್ವಯ ಕೇಳಿದಾಗಿ ದಿನಕ್ಕೆ ಸರಾಸರಿ 65 ಟಿಕೇಟ ಮಾರಾಟವಾಗುತ್ತವೆ ಎಂದು ಹೇಳಿದ್ದು, ಸೋಲಾಪುರ ವಿಭಾಗದ ದ್ವಿಮುಖ ನೀತಿ, ದಿಕ್ಕು ತಪ್ಪಿಸುವ ಕಾರ್ಯ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಕಲಬುರಗಿಗಿಂತ ಹುಟಗಿ ದೊಡ್ಡದೆ.
ಮಾತಿನ ಭರದಲ್ಲಿ ರೈಲ್ವೆ ಅಧಿಕಾರಿಗಳೊಬ್ಬರು ನೀಡಿದ ಮಾಹಿತಿ ಪ್ರಕಾರ ಸೋಲಾಪುರ ಸಮೀಪವೆ ಇರುವ ಹುಟಗಿಯ (ಜಂ)ನಲ್ಲಿ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿರುವ ಕಾಯ್ದಿರಿಸುವ ಸ್ಥಾನಕ್ಕೆಂತಲು ಹೆಚ್ಚಿವೆ ಎಂದು ಹೇಳಿದ್ದರು. ಇದರಿಂದ ರೈಲ್ವೆ ಇಲಾಖೆಗೆ ಕಲಬುರಗಿಗಿಂತ ಹುಟಗಿ (ಜಂ) ದೊಡ್ಡದೆ ?? ಇದರಿಂದ ಸೋಲಾಪುರ ವಿಭಾಗ ಕಲಬುರಗಿ ಭಾಗಕ್ಕೆ ಮಾಡುತ್ತಿರುವ ಅನ್ಯಾಯ ಸ್ಪಷ್ಟವಾಗುತ್ತದೆ ಎಂದು ಸ್ಥಳೀಯ ಮುಖಂಡರು ಅಕ್ರೋಶ ವ್ಯಕ್ತಪಡಿದರು.
ಕೋವಿಡ್-19 ನಿಂದ ಪ್ರಾರಂಭಿಸಿರುವ 0 ಅಂಕಿಯ ರೈಲ್ವೆ ಸಂಖ್ಯೆ ತೆಗೆದಾದ ಎಲ್ಲಾ ರೈಲು ನಿಲ್ಲುತ್ತವೆ ಎನ್ನುವ ಅಶ್ವಾಸನೆ ಲಿಖಿತವಾಗಿ ಭರವಸೆ ನೀಡಲು ಜನರು ಕೇಳಿದಾಗ ಅಧಿಕಾರಿಗಳು ಅದು ರೈಲ್ವೆ ಬೋರ್ಡ ವ್ಯಾಪ್ತಿಗೆ ಒಳ ಪಟ್ಟಿದ್ದಾಗಿದೆ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡರು.
ಅಂತಿಮವಾಗಿ ಕೋವಿಡ_19 ಮುಂಚಿನ ಎಲ್ಲಾ ಎಕ್ಸಪ್ರೆಸ್ ರೈಲು ನಿಲ್ಲಿಸುವದು, ಪ್ಯಾಸೆಂಜರ್ ರೈಲು ಪ್ರಾರಂಭಿಸುವದು, ಸೀಸನ್ ಟಿಕೇಟ್, ಇಲ್ಲಿಯೇ ಟಿಕೇಟ್ ನೀಡುವದು, ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿರುವ ರಸ್ತೆಗೆ ಅಡ್ಡಲಾಗಿರುವ ಕಂಬಗಳನ್ನು ತೆಗೆಯುವದು ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವದಾಗಿ ಅಧಿಕಾರಿಗಳು ತಿಳಿಸಿದರು. ನ.22 ರಂದು ಮತ್ತೆ ಸಭೆ ನಡೆಸಲು ತಿರ್ಮಾನಿಸಲಾಯಿತು. ಮುಂದಿನ ಸಭೆಯಲ್ಲಿ ಸೋಲಾಪುರ ಡಿಸಿಎಂ ಸ್ಥಳಕ್ಕೆ ಬರಲು ಇಲ್ಲವೆ, ಸಂಪೂರ್ಣ ಅಧಿಕಾರ ಪಡೆದುಕೊಂಡ ಅಧಿಕಾರಿಗಳು ಸ್ಥಳಕ್ಕೆ ಬರಲು ತಾಕೀತು ಮಾಡಿದರು.
ಶಹಾಬಾದ ಡಿವೈಎಸ್‍ಪಿ ಉಮೇಶ ಚೌಕಿಮಠ, ರೈಲ್ವೆ ಡಿವೈಎಸ್‍ಪಿ ವೆಂಕಣ್ಣಗೌಡ ಪಾಟೀಲ, ಪಿಎಸ್‍ಐ ವೀರಭದ್ರಪ್ಪ, ಸಿಆರ್‍ಪಿಎಫ್ ರಮೇಶ ಕಾಂಬಳೆ, ಪವಾರ, ರೈಲ್ವೆ ಇಲಾಖೆ ಸಿಸಿಐ ಸುಬೋದ ಕುಮಾರ, ಡಿಸಿಐ ಗಣೇಶ ಕಾಂಬಳೆ, ಎಸ್.ಜಿ.ದೇಸಾಯಿ, ಹೋರಾಟ ಸಮಿತಿ ಗೌರವ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ, ಅಧ್ಯಕ್ಷ ಮಹ್ಮದ ಉಬೇದುಲ್ಲಾ, ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜೆಡಿಎಸ್ ಅಧ್ಯಕ್ಷ ರಾಜ ಮಹ್ಮದ ರಾಜಾ, ಬಿಎಸ್‍ಪಿ ಮುಖಂಡ ಶೇಖ ಬಾಬು ಉಸ್ಮಾನ, ವಾಡಿ ಶಹಾಬಾದ ಯೋಜನಾ ಪ್ರಾಧಿಕಾರಿ ಅಧ್ಯಕ್ಷ ಕನಕಪ್ಪ ದಂಡಗುಲಕರ್, ನಗರ ಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಅರುಣಕುಮಾರ ಪಟ್ಟಣಕರ್, ಶರಣಗೌಡ ಪಾಟೀಲ, ಲೋಹಿತ ಕಟ್ಟಿ, ಫಜಲ್ ಪಟೇಲ, ಕುಮಾರ ಚವ್ಹಾಣ, ಕೃಷ್ಣಪ್ಪ ಕರಣಿಕ, ಅಜೇಮ ಸೇಠ, ಕೆ.ರಮೇಶ ಭಟ್ಟ, ಸುಭಾಷ ಜಾಪೂರ, ವಾಸುದೇವ ಚವ್ಹಾಣ, ಶರಣು ಪಗಲಾಪುರ, ಬಸವರಾಜ ಮಯೂರ, ದೇವರಾಜ ರಾಠೋಡ, ಕಿರಣ ಚವ್ಹಾಣ, ಅವಿನಾಶ ಕಂಬಾನೂರ ಇತರರು ಪಾಲ್ಗೊಂಡಿದ್ದರು.