ದಾರಿಯಲ್ಲಿ ಸಿಕ್ಕ 1.50 ಲಕ್ಷ ರೂ. ಪೊಲೀಸರಿಗೆ ಒಪ್ಪಿಸಿದ ಶರಣು

ಚಿಂಚೋಳಿ,ಜು.12- ವ್ಯಾಪಾರಸ್ಥರಾದ ಇಲ್ಲಿನ ಚಂದಾಪೂರದ ನಿವಾಸಿಯಾದ ಲೋಕೇಶ ಶೆಳ್ಳಗಿ ಅವರು, ತಮ್ಮ ಬ್ಯಾಂಕ್ ವ್ಯವಹಾರಕ್ಕೆಂದು (1,50,000) ಒಂದು ಲಕ್ಷ ಐವತ್ತು ಸಾವಿರ ರೂ. ಗಳ ನಗದನ್ನು ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟುಕೊಂಡು ತಮ್ಮ ಮೋಟಾರ ಸೈಕಲ್ ಮೂಲಕ ಚಿಂಚೋಳಿ ಮನ್ನಾಎಖೇಳ್ಳಿ ಮುಖ್ಯ ರಸ್ತೆ ಬದಿಯಲ್ಲಿರುವ ಪಿ.ಕೆ.ಜಿ.ಬಿ. ಬ್ಯಾಂಕಿಗೆ ಹೋಗುತ್ತಿದ್ದಾಗ, ಅವರಿಗೆ ಗೊತ್ತಾಗದಂತೆ ಹಣದ ಪ್ಲಾಸ್ಟಿಕ್ ಚೀಲವು ಮೂಕಾಂಬಿಕಾ ಉಡುಪಿ ಹೋಟೇಲ್ ಮುಂದುಗಡೆ ಬಿದ್ದಿರುತ್ತದೆ ಅದೇ ಸಮಯದಲ್ಲಿ ಟಿಫಿನ್ ಮಾಡಲೆಂದು ಇದೇ ರಸ್ತೆಯ ಮೂಲಕ ಮೋಟಾರ ಸೈಕಲ್ ಮೂಲಕ ಮೂಕಾಂಬಿಕಾ ಹೋಟೆಲ್ ಕಡೆಗೆ ಹೋಗುತ್ತಿದ್ದ ನಿರ್ಣಾ ಗ್ರಾಮದ ಶರಣು ತಂದೆ ಪ್ರಭು ತಲ್ವಾಡಿ ರವರಿಗೆ ಆ ಪ್ಲಾಸ್ಟಿಕ್ ಬ್ಯಾಗ ಕಾಣಿಸಿದಾಗ, ತಮ್ಮ ಮೋಟಾರ ಸೈಕಲನ್ನು ನಿಲ್ಲಿಸಿ, ಹಣವಿದ್ದ ಪ್ಲಾಸ್ಟಿಕ್ ನ್ನು ತೆಗೆದುಕೊಂಡು, ಹೈವೇ ಪ್ಯಾಟ್ರೋಲಿಂಗ್ ಕರ್ತವ್ಯದಲ್ಲಿದ್ದ ಚಿಂಚೋಳಿ ಪೆÇಲೀಸ್ ಠಾಣೆಯ ಗೌರಿ ಶಂಕರ ಎ.ಎಸ್.ಐ ರವರಿಗೆ
ಒಪ್ಪಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಹಣ ಕಳೆದುಕೊಂಡ ಲೋಕೇಶ ರವರು ಠಾಣೆಗೆ ಹಣ ಕಳೆದು ಹೋದ ಬಗ್ಗೆ ದೂರು ನೀಡಲು ಬಂದಾಗ, ಚಿಂಚೋಳಿ ಪೆÇಲೀಸ್ ಠಾಣೆಯ ಮಂಜುನಾಥ ರೆಡ್ಡಿ ಪಿ.ಎಸ್.ಐ, ಹೈ ವೇ ಪ್ಯಾಟ್ರೋಲಿಂಗ್ ಕರ್ತವ್ಯದ ಮೇಲಿದ್ದ ಗೌರಿ ಶಂಕರ ಎ.ಎಸ್.ಐ ರವರು ಹಣವನ್ನು ಕಳೆದುಕೊಂಡ ಲೋಕೇಶ ಬೆಳ್ಳಗಿ ರವರಿಗೆ ಹಣವನ್ನು ಒಪ್ಪಿಸಿ, ಪ್ರಮಾಣಿಕತೆ ಹಾಗೂ ಮಾನವೀಯತರ ಮೆರೆದಿರುವ ಶರಣು ತಂದೆ ಪ್ರಭು ತಲ್ವಾಡಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪೆÇಲೀಸ್ ಠಾಣೆಯ ಸಿಬ್ಬಂದಿಯವರಾದ ಶ್ರೀಮಂತ್ರಾಲಯ, ನಾಗರಾಜ್, ಶಿವಾನಂದ, ಮಹೇಶ ರೆಡ್ಡಿ, ರೇವಣಸಿದ್ದಪ್ಪ, ಶಿಲ್ಪ ಕಲಾ, ಶಿವಲೀಲಾ, ಇದ್ದರು