ದಾರಿಗಾಗಿ ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭ

oppo_0

ತಾಳಿಕೋಟೆ:ಮೇ.28: ಜಮೀನುಗಳಿಗೆÉ ಹೋಗಲು ದಾರಿ ಸಮಸ್ಯೆ ಬಗೆಹರಿಯದ ಕಾರಣ ತಾಳಿಕೋಟೆ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕಿನ ಗೊಟಗುಣಕಿ ಹಾಗೂ ಪತ್ತೇಪುರ ಪಿಟಿ ಗ್ರಾಮದ ರೈತರು ಸೋಮವಾರರಂದು ಅಹೋ ರಾತ್ರಿ ಧರಣಿಯನ್ನು ಪ್ರಾರಂಬಿಸಿದರು.
ಈ ಸಮಯದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸಂಘಟನೆ ವತಿಯಿಂದ ಧರಣಿನಿರತರಿಗೆ ಬೆಂಬಲಿಸಿ ಮಾತನಾಡಿ ಅಧಿಕಾರಿಗಳು ರೈತ ವಿರೋಧಿ ನೀತಿಯನ್ನು ಖಂಡಿಸಿದರಲ್ಲದೇ ಹೊಲಗಳಿಗೆ ಹೋಗಲು ದಾರಿ ಇದ್ದರು ಕೂಡಾ ತಕರಾರು ಮಾಡುವಂತಹ ರೈತರಿಗೆ ದಾರಿ ಕೊಡಲು ರೈತನಿಗೆ ತಿಳಿ ಹೇಳಿ ದಾರಿ ಕೊಡಿಸಲು ಸರ್ಕಾರ ಈಗಾಗಲೆ ಸುತ್ತೋಲೆ ಹೊರಡಿಸಿದೆ ಸೋತ್ತೋಲೆ ಜಾರಿಯಾಗಿ 7-8 ತಿಂಗಳು ಗತಿಸಿದರೂ ಇಲ್ಲಿಯವರೆಗೂ ಯಾವೊಬ್ಬ ರೈತರ ದಾರಿ ಸಮಸ್ಯೆ ಬಗೆಹರಿಸಿದ ಉದಾಹರಣೆ ಇಲ್ಲ ಸರ್ಕಾರದ ಸುತ್ತೋಲೆಯನ್ನು ತಪ್ಪು ಇದೆ ಎಂದು ತಹಶೀಲ್ದಾರರು ಹೇಳುತ್ತಿದ್ದಾರೆ. ಇದರಿಂದ ರೈತರು ದಾರಿಗಾಗಿ ಪರಿತಪಿಸುª ಪರಿಸ್ಥಿತಿÀ ಮುಂದುವರೆದಿದೆ. ಸರ್ಕಾರ ದಾರಿ ವಿಷóಯವಾಗಿ ರೈತರೊಂದಿಗೆ ಚಲ್ಲಾಟವಾಡುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಇಡಾಗಿದ್ದಾರೆ. ಆದ್ದರಿಂದ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ ಗೊಟಗುಣಕಿ ಮತ್ತು ಪತ್ತೇಪೂರ ಪಿಟಿ ಗ್ರಾಮದ ರೈತರ ದಾರಿ ಸಮಸ್ಯೆ ಬಗೆಹರಿಸುವವರೆಗೂ ಧರಣಿ ಸತ್ಯಾಗ್ರಹವನ್ನು ಅಹೋರಾತ್ರಿ ಮುಂದುವರೆಯಲಿದೆ ರಾತ್ರಿ ಸಮಯದಲ್ಲಿ ಧರಣಿ ನಿರತ ರೈತರಿಗೆ ಏನಾದರೂ ಹೆಚ್ಚುಕಮ್ಮಿಯಾದರೆ ಅದಕ್ಕೆ ನೇರವಾಗಿ ತಹಶಿಲ್ದಾರರೇ ಕಾರಣರಾಗಿದ್ದಾರೆಂದು ತಿಳಿಸಿದರು.
ತಾಳಿಕೋಟೆ ತಾಲೂಕಿನ ಗೊಟಗುಣಕಿ ಗ್ರಾಮದ ರೈತರಾದ ಸಾಹೇಬಗೌಡ ಬಿರಾದಾರ ಹಾಗೂ ಪಿ.ಟಿ ಪತ್ತೇಪೂರ ಗ್ರಾಮದ ರೈತರಾದ ಸದಾಶಿವ ಗೊಟಗುಣಕಿ ರೈತರು ಮಾತನಾಡಿ ನಮ್ಮ ಹೊಲಕ್ಕೆ ಮೊದಲಿನಿಂದಲು ಜಮೀನಿಗೆ ಹೋಗಲು ದಾರಿ ಇದ್ದು ಅದೇ ರಸ್ತೆಯಿಂದ ನಮ್ಮ ನಮ್ಮ ಜಮೀನಿಗೆ ಹೋಗುತ್ತಿದ್ದೇವು ಆದರೆ ಇತ್ತಿಚಿನ ದಿನಗಳಲ್ಲಿ ದಾರಿ ಬಂದುಗೊಳಿಸಿದ್ದಾರೆ. ಇದರಿಂದ ನಮ್ಮ ಜಮೀನಿಗೆ ತೆರಳಿ ಉಳಿಮೆ ಮಾಡಲು ಕಷ್ಟಕರವಾಗಿದೆ. ಆದ್ದರಿಂದ ಕೂಡಲೆ ದಾರಿ ಕೊಡಿಸಿ ಅನುಕೂಲು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾಹೇಬಗೌಡ ಬಿರಾದಾರ, ಶ್ರೀನಿವಾಸ ಗೋಟಗುಣಕಿ, ತಾಳಿಕೋಟೆ ತಾಲೂಕಾ ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷರಾದ ಬಾಲ್ಲಪಗೌಡ ಲಿಂಗದಳ್ಳಿ, ಶಿವನಗೌಡ ಕರಕಳ್ಳಿ, ಅಶೋಕ ಮಾಸ್ತಿ, ಯಲ್ಲಾಲಿಂಗ ಹೂಗಾರ, ಶಂಕರಗೌಡ ಪಾಟೀಲ, ಶಂಕ್ರಮ್ಮ ರಾಜಾಪೂರ, ಶೈಲು ಬಿರಾದಾರ, ಅನೀಲಕುಮಾರ ರಾಜಪೂರ, ಮೊದಲಾದವರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.