ದಾನ ಮಾಡುವ ಪ್ರವೃತ್ತಿ ಪ್ರತಿಯೊಬ್ಬರಲ್ಲಿ ಬರಬೇಕಿದೆ:ನಮಾಜಕಟ್ಟಿ

ತಾಳಿಕೋಟೆ : ಎ.21:ದೇವರು ಸಿರಿವಂತಿಕೆ ಕೊಟ್ಟಾಗ ದುಡಿಮೆಯ ಒಂದು ಭಾಗ ಬಡವರಿಗಾಗಿ, ಸಮಾಜಕ್ಕಾಗಿ ದಾನ ಮಾಡುವ ಪ್ರವೃತ್ತಿ ಪ್ರತಿಯೊಬ್ಬರಲ್ಲಿ ಬರಬೇಕಿದೆ ಎಂದು ಶಿಕ್ಷಕ ಜನಾಬ್ ಮೊಹಮ್ಮದ್‍ಕಾಸಿಂ ನಮಾಜಕಟ್ಟಿ ಅವರು ಹೇಳಿದರು.

   ಪಟ್ಟಣದ ಟಿಪ್ಪು ನಗರ ಬಡಾವಣೆಯ ಲಾಲ್ ಮಸೀದಿ ಸಭಾಭವನದಲ್ಲಿ ಮನಿಯಾರ್ ಸಮಾಜ ಸೇವಾ ಟ್ರಸ್ಟ್ ಹಾಗೂ ಜಮಾತೆ ಇಸ್ಲಾಮಿ ಹಿಂದ್ ತಾಳಿಕೋಟೆ ಇವರ ಸಹಯೋಗದಲ್ಲಿ ಬಡವರಿಗೆ ರಂಜಾನ್ ಹಬ್ಬ ಆಚರಿಸಲು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡವನು ಬಡವನಾಗಿ ಉಳಿಯಬಾರದು ಅಂತಹ ಬಡವರನ್ನು ಆರ್ಥಿಕವಾಗಿ ಸಮಾಜದಲ್ಲಿ ಮೇಲೆತ್ತುವಂತಹ ಕಾರ್ಯವಾಗಬೇಕು ತಮ್ಮ ತಂದೆ ತಾಯಿಯ ಸ್ಮರಣಾರ್ಥವಾಗಿ ರಂಜಾನ್ ಹಬ್ಬದ ಸಮಯದಲ್ಲಿ ಬಡವರಿಗೆ ಕಿಟ್‍ಗಳನ್ನು ನೀಡುತ್ತಾ ಬಡವರಲ್ಲಿ ತಮ್ಮ ತಂದೆ ತಾಯಿಯನ್ನು ಕಾಣುತ್ತಿರುವ ಉದ್ಯಮಿ,ಸಮಾಜ ಸೇವಕ ಅಯ್ಯೂಬ್ ಮನಿಯಾರ್ ಅವರ ಕಾರ್ಯ ಮಾದರಿಯಾದಂತಹದ್ದಾಗಿದೆ ಎಂದರು.

ಮನಿಯಾರ್ ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಯ್ಯೂಬ್ ಮನಿಯಾರ್ ಮಾತನಾಡಿ, ರಂಜಾನ್ ಕಿಟ್ ಕೊಡಲು ಕಾರಣ 1988 ರಿಂದಲೂ ಕೊಡುವ ಕೆಲಸ ಮಾಡುತ್ತಿದ್ದೇನೆ. ನಾನು ಬಡವರಿಗೆ ಹಬ್ಬ ಮಾಡಿಸಿದ ಮೇಲೆ ನನಗೆ ಹಬ್ಬ ಮಾಡಿದ ಖುಷಿ ಸಿಗುತ್ತದೆ. ಬಡವರಲ್ಲಿ ನನ್ನ ತಂದೆ ತಾಯಿ ಕಾಣುತ್ತಿದ್ದೇನೆ ಕೆಲವರು ತಂದೆ ತಾಯಿಗಳಿಗೆ ಮಕ್ಕಳು ನೇತ್ರದ ಸಮಸ್ಯೆ ಇದ್ದರೂ ಆಪರೇಷನ್ ಮಾಡಿಸುವುದಿಲ್ಲ,ಕೆಲವು ಗಂಡಂದಿರು ಹೆಂಡತಿಯರಿಗೆ ಆಪರೇಷನ್ ಮಾಡಿಸುವುದಿಲ್ಲ.ಇದನ್ನು ನಾನು ಕಣ್ಣಾರೆ ಕಂಡಿದ್ದು ಅದು ಹೋಗಲಾಡಿಸಲು ಬಡವರಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ ಮಾಡಿಸುವ ಕಾರ್ಯ ಪ್ರತಿವರ್ಷ ಮಾಡುತ್ತಿದ್ದೇನೆ ಎಂದರು.

ಇದೇ ಸಮಯದಲ್ಲಿ ಜಮಾತೆ ಇಸ್ಲಾಮಿ ಹಿಂದ್ ತಾಳಿಕೋಟೆ ಘಟಕದ ವತಿಯಿಂದ 345 ಬಡವರಿಗೆ ರಂಜಾನ ಹಬ್ಬ ಆಚರಣೆಗೆ ಪ್ರತಿಯೊಬ್ಬರಿಗೆ 500 ರೂ. ಸಹಾಧನವನ್ನು ನೀಡಲಾಯಿತು.

ಜನಾಬ್ ಅಲ್ಲಾಬಕ್ಷ ನಮಾಜಕಟ್ಟಿ ಕುರಾನ್ ಪಠಿಸಿದರು.

ಈ ಸಮಯದಲ್ಲಿ ಮನಿಯಾರ್ ಅವರ ಪತ್ನಿ ಪರವಿನ್ ಮನಿಯಾರ್, ಶ್ರೀಮತಿ ಆಫ್ರೀನ್ ನಮಾಜಕಟ್ಟಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಇಬ್ರಾಹಿಂ ಮನ್ಸೂರ, ಮುಖಂಡರಾದ ಹಸನಸಾಬ ಕೊರ್ಕಿ, ಬುರಾನಸಾಬ ಕಲಾಸಿ, ಖುತಬುದ್ದೀನ ಮೋಮಿನ್, ಮಶಾಕಸಾಬ ನಗಾರ್ಚಿ, ಮುನ್ನಾ ಏಕೀನ್, ಮೊದಲಾದವರು ಇದ್ದರು.

 ಮುಜಾಹಿದ್ ನಮಾಜಕಟ್ಟಿ ನಿರೂಪಿಸಿ ವಂದಿಸಿದರು.