ದಾನ ಮಾಡುವ ಗುಣ ರೂಢಿಸಿಕೊಳ್ಳಬೇಕು

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಆ23: ಮಾನವನಾಗಿ ಹುಟ್ಟಿದ ನಾವು ದಾನ ಮಾಡುವುದು ರೂಢಿಸಿಕೊಳ್ಳಬೇಕು. ಮುಂದೊಂದು ದಿನ ನಮಗೆ ಪ್ರತಿಫಲ ದೊರೆಯುತ್ತದೆ ಎಂದು ಸ್ವಾಭಿಮಾನಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೀರಪ್ಪ ದೇಶನೂರ ಹೇಳಿದರು.
ಚುನಾಯಿತರಾದ ನಂತರ ಸಮೀಪದ ಮರಡಿನಾಗಲಾಪೂರ ಗ್ರಾಮಕ್ಕೆ ಮೊದಲ ಬಾರಿ ಭೇಟಿ ನೀಡದ ಶಾಸಕ ಬಾಬಾಸಾಹೇಬ ಪಾಟೀಲರನ್ನು ಗ್ರಾಮಸ್ಥರ ಪರವಾಗಿ ಸತ್ಕರಿಸಿ ಅವರು ಮಾತನಾಡಿದರು.
ನಂತರ ಶಾಸಕರು ಗ್ರಾಮದ ಬೀರಪ್ಪಜ್ಜನ ದೇವರ ದರ್ಶನ ಪಡೆದು ಈ ಕ್ಷೇತ್ರದ ಅಭಿವೃದ್ದಿಗಾಗಿ ಜಾತಿ-ಭೇದ ಮರೆತು ಶ್ರಮಿಸುತ್ತೇನೆ ಎಂದರು.
ಈ ಸಮಯ ಮಾಜಿ ಜಿ.ಪಂ ಹಾಗೂ ಕೆಪಿಪಿಸಿ ಸದಸ್ಯೆ ರೋಹಿನಿ ಪಾಟೀಲರನ್ನು ಸತ್ಕರಿಸಲಾಯಿತು.
ಈ ವೇಳೆ ಅಧ್ಯಕ್ಷ ಬಾಬು ಚಂದರಗಿ, ಬೋಲಹೊಂಗಲ ಸಿಪಿಐ ಸಾಲಿಮಠ, ಸ್ವಾಭಿಮಾನಿ ರಾಜ್ಯ ರೈತ ಸಂಘದ ಸಂಚಾಲಕರುಗಳಾದ ಚಿದಾನಂದ ಲೋಕೂರು, ಲಕ್ಷ್ಮಣ ಗೊರಗುದ್ದಿ, ಸೆದೆಪ್ಪ ವಣ್ಣೂರ, ಮಾರುತಿ ಸತ್ಯನ್ನವರ, ವಿಠ್ಠಲ ಹಂಚಿನಮನಿ, ಯಲ್ಲಪ್ಪ ಕರಬಣ್ಣವರ, ಸಿದ್ದಪ್ಪ ಸೇರಿದಂತೆ ಗ್ರಾಮಸ್ಥರಿದ್ದರು.