ದಾನ ಮಾಡುವುದು ಪುಣ್ಯದ ಕಾರ್ಯ


(ಸಂಜೆವಾಣಿ ವಾರ್ತೆ)
ಗುಳೇದಗುಡ್ಡ ಜು.5- ದಾನ ಮಾಡುವುದು ಒಂದು ಪುಣ್ಯದ ಕಾರ್ಯ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ದಾನ ರೂಪದಲ್ಲಿ ನೀಡುವುದರ ಮೂಲಕ ವಿದ್ಯಾರ್ಥಿಗಳ ಆದರ್ಶ, ಉಜ್ವಲ ಭವಿಷ್ಯಕ್ಕೆ ಅವರ ಕೊಡುಗೆ ವಿಶೇಷವಾಗಿರುತ್ತದೆ ಎಂದು ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಜಯ ಬರಗುಂಡಿ ಹೇಳಿದರು.
ಅವರು ಪ್ರತಿಷ್ಟಿತ ಪಟ್ಟಣದ ಶ್ರೀ ಒಪ್ಪತ್ತಿನ ಸ್ವಾಮಿಗಳ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಾದ ಪಿ.ಎನ್.ಪವಾರ ಅವರು ಕೊಡ ಮಾಡಿದ ವಿದ್ಯಾರ್ಥಿಗಳ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ನೀಡಿರುವ ಕಲಿಕಾ ಸಾಮಗ್ರಿಗಳನ್ನು ಸದುಪಯೋಗವನ್ನು ಪಡಿಸಿಕೊಂಡು ಹಾಗೂ ಗುಣಾತ್ಮಕ ಶಿಕ್ಷಣದೊಂದಿಗೆ ಆದರ್ಶ ಬದುಕು ರೂಪಿಸಿಕೊಳ್ಳಬೇಕು ಎಂದು ಮುಕ್ತಕಂಠದಿಂದ ಹೇಳಿದರು.
ಪವಾರ್ ಅವರು ಮಾತನಾಡಿ, ಶಿಕ್ಷಣ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಗುಣಾತ್ಮಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಿರುಪಾಕ್ಷಪ್ಪ ಕಳ್ಳಿಗುಡ್ಡ, ಕಾರ್ಯದರ್ಶಿ ರಾಚಣ್ಣ ಕೆರೂರ, ನಿರ್ದೇಶಕರಾದ ಬಸವರಾಜ ಚಿಕ್ಕನರಗುಂದ, ಮೋಹನ್ ಕರನಂದಿ, ಸಂಗಣ್ಣ ಪಟ್ಟಣಶೆಟ್ಟಿ, ಚಂದ್ರಶೇಖರ್ ಮುರುಡಿ ಮತ್ತು ಮುಖಂಡರಾದ ವಿಶ್ವನಾಥ ರಾಯಬಾಗಿ, ಸಂಗಪ್ಪ ಹಡಪದ ಶಾಲೆಯ ಮುಖ್ಯ ಶಿಕ್ಷಕರಾದ ಬಿ.ಎಸ್.ಶೆಟ್ಟರ, ಶರಣಮ್ಮ ಅಂಗಡಿ, ವಿ.ಎಂ.ಕವಿಶೆಟ್ಟಿ, ಎಸ್.ಬಿ.ಹೊಸಮನಿ, ಪಿ.ಎಸ್.ತಾಂಡೂರ ಮತ್ತಿತರ