ದಾನ ಮಾಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ

ಮೈಸೂರು, ಜೂ.4: ನಮ್ಮ ಮೈಸೂರಿನ ಹೆಮ್ಮೆ, ಸ್ಮರಣೀಯರೂ, ಅಜಾರಮರರೂ, ಪ್ರಜಾರಾಜರೂ ಆದ ಮಹಾರಾಜರು ರಾಜರ್ಷಿ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಓಡೆಯರ್ ರವರ 137ನೇ ಜಯಂತಿಯ ಅಂಗವಾಗಿ ಕೆ.ಎಂ.ಪಿ.ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಯುವ ಬಳಗದ ವತಿಯಿಂದ ಜಯನಗರದಲ್ಲಿರುವ ಛಾಯಾದೇವಿ ಅನಾಥಾಶ್ರಮದಲ್ಲಿ ಇರುವಂತಹ ಬಡ ಮಕ್ಕಳಿಗೆ ಹಾಗೂ ವೃದ್ಧರಿಗೆ ಹಣ್ಣು ಹಂಪಲು ಹಾಗೂ ಬ್ರೆಡ್ ಹಾಗೂ ಆಹಾರ ಕಿಟ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನಾಲ್ವಡಿ ಸ್ಮರಿಸಲಾಯಿತು.
ದಾನ ಧರ್ಮ ಮಾಡುವುದರಿಂದ ಇರುವ ಸಂಪತ್ತು ಕಡಿಮೆಯಾಗುವುದಿಲ್ಲ ಬದಲಿಗೆ ಸಂಪತ್ತು ಹೆಚ್ಚಾಗುತ್ತಿದೆ ಅದರ ಜತೆಗೆ ಆಯುಷ್ಯ ವೃದ್ಧಿಸುತ್ತದೆ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ನಿರ್ಗತಿಕರಿಗೆ ಬಡವರಿಗೆ ಸಹಾಯ ಮಾಡಿ ಬಡವರ ಕಣ್ಣೀರೊರೆಸುವ ಧರ್ಮದ ಕೆಲಸ ಮಾಡಬೇಕೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ನಗರಕ್ಕೆ ನೀಡಿರುವ ಕೊಡುಗೆಗಳನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನಿರ್ಮಿಸಿದ ಕೆ.ಆರ್.ಮಾರುಕಟ್ಟೆಯನ್ನು ನಾವು ದುರಸ್ತಿ ಮಾಡಿಸಿ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವರಿಗೆ ಅವಮಾನ ಮಾಡಿದಂತೆ ಆಗುತ್ತದೆ’ ಮೈಸೂರು ರಾಜ್ಯದ ರಾಜರಾಗಿ, ಸಾಮಾಜಿಕ ನ್ಯಾಯ ಅನುಷ್ಠಾನಗೊಳಿಸಿದರು. ಕೃಷಿ, ಬ್ಯಾಂಕಿಂಗ್, ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದರು ಎಂದು ಸ್ಮರಿಸಿದರು.
ನಂತರ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ.ರಘುರಾಂ ವಾಜಪೇಯಿ ಮಕ್ಕಳಿಗೆ ಮೈಸೂರು ಸಂಸ್ಥಾನ ಕಂಡ ಅತೀ ಪ್ರಜಾ ವಾತ್ಸಲ್ಯ ಹೊಂದಿದ್ದಂತಹ ಮಹಾರಾಜರು ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರು ಬಹುಶಃ ವಿಶ್ವದ ಅರಸೊತ್ತಿಗೆ ಸಂಪ್ರದಾಯದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ನಮ್ಮ ನಾಲ್ವಡಿಯವರು ಅವರ ಸಂಸ್ಥಾನವನ್ನು ಸರ್ವತೋಮುಖ ಬೆಳವಣಿಗೆಗೆ ತುಂಬಾ ಶ್ರಮಿಸಿದಂಥವರು ಒಳ್ಳೆಯ ದಕ್ಷ ದಿವಾನರುಗಳನ್ನು ನೇಮಿಸಿ ಇಡೀ ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿ ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಮೈಸೂರು ಸಂಸ್ಥಾನಕ್ಕೆ ಎರಡ್3ಬಾರಿ ಆಗಮಿಸಿದ್ದರು ಅವರು ನಾಲ್ವಡಿಯವರ ಆಡಳಿತವನ್ನು ನೋಡಿ ರಾಮರಾಜ್ಯ ಇನ್ನೇನು ಬೇಕು ನಮ್ಮ ಮೈಸೂರು ಸಂಸ್ಥಾನವು ರಾಮರಾಜ್ಯ ಇಲ್ಲಿಗೆ ಯಾವ ಸ್ವಾತಂತ್ರ್ಯ ಹೋರಾಟವು ಬೇಕಾಗಿಲ್ಲ ಎಂಬುದಾಗಿ ಶ್ಲಾಘನೆ ಮಾಡದಂತಹ ನಮ್ಮ ಮೈಸೂರು ಸಂಸ್ಥಾನ ಅವನ ನಾಲ್ವಡಿಯವರು ರೂಪಿಸಿದ ಬಗೆ ಇಂದಿಗೂ ನಮ್ಮ ಮೈಸೂರು ಸಂಸ್ಥಾನ ಹಳೆ ಮೈಸೂರು ಸಂಸ್ಥಾನದ ಜನತೆ ರಾಜಭಕ್ತಿಯನ್ನು ಉಳಿಸಿಕೊಂಡಿದ್ದರೆ ಹಾಗೆ ಆ ನಿಮಿತ್ತ 137 ನಾಲ್ವಡಿಯವರ ಜಯಂತಿಯನ್ನು ಅರ್ಥಪೂರ್ಣವಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಮೂಲಕ ಆಚರಿಸಲಾಯಿತು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ.ಎನ್.ನವೀನ್ ಕುಮಾರ್, ಹಾಗೂ ಛಾಯಾದೇವಿ ಅನಾಥಾಶ್ರಮದ ಸಿಬ್ಬಂದಿ ವರ್ಗದವರು ಹಾಜರಿದ್ದರು.