ದಾನೇಶ್ವರಿ ಮಹಿಳಾ ಸಂಘದ ಉದ್ಘಾಟನಾ ಸಮಾರಂಭ


ಮುನವಳ್ಳಿ,ಎ,3: ಪಟ್ಟಣದ ಅಕ್ಕಮಹಾದೇವಿ ಕಲ್ಯಾನಮಂಟಪದಲ್ಲಿ ಭುದವಾರ ಸಂಜೆ ದಾನೇಶ್ವರಿ ಮಹಿಳಾ ಸಂಘದ ಉದ್ಘಾಟನೆಯನ್ನು ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಗೋಪಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ವೈ.ಬಿ.ಕಡಕೋಳ ಮಾತನಾಡಿದರು ಪಟ್ಟಣದಲ್ಲಿ ಹುಟ್ಟು ಹಾಕಿರುವ ಶ್ರೀ ದಾನೇಶ್ವರಿ ಮಹಿಳಾ ಸಂಘಟನೆ ತನ್ನ ಧ್ಯೆಯೋದ್ದೇಶಗಳೊಂದಿಗೆ ಮಹಿಳೆಯರಿಗೆ ಬದುಕಿನ ಮೌಲ್ಯಗಳನ್ನು ಮೂಡಿಸುವ ಜೊತೆಗೆ ಸ್ತ್ರೀ ಶಕ್ತಿ ಹೊರಹೊಮ್ಮುವಂತಹ ಚಟುವಟಿಕೆಗಳನ್ನು ಆಯೋಜಿಸಿ ಸ್ತ್ರೀಯರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ ಎಂದರು. ಅಧ್ಯಕ್ಷತೆಯನ್ನು ಎಸ್.ಪಿ.ಜೆ.ಜಿ ಪ್ರೌಢಶಾಲೆಯ ಪ್ರಧಾನ ಗುರುಮಾತೆ ಅನ್ನಪೂರ್ಣ ಲಂಬೂನವರ ವಹಿಸಿದ್ದರು, ಪದೋನ್ನತಿ ಹೊಂದಿ ಮುಖ್ಯೋಪಾಧ್ಯಾಯನಿ ಹುದ್ದೆ ಹೊಂದಿದ ಅನ್ನಪೂರ್ಣ ಲಂಬೂನವರ ಅವರನ್ನು ಸನ್ಮಾನಿಸಲಾಯಿತು ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ಶ್ರೀ ದಾನೇಶ್ವರಿ ಮಹಿಳಾ ಸಂಘ ಉತ್ತಮ ವಿಚಾರಗಳನ್ನು ಹೊಂದಿದೆ ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ಅನುಕೂಲವಾಗುವ ಚಟುವಟಿಕೆಗಳನ್ನು ಮಹಿಳಾ ದಿನಾಚರಣೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಸಂಘಟಿಸುವಂತಾಗಲಿ. ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಆಶಾ ಕಾರ್ಯಕರ್ತೆ ಶಾಂತಾ ಗೋದಿ ಮಾತನಾಡಿ ಮಹಿಳೆ ನಾಲ್ಕು ಗೋಡೆಗಳ ಮಧ್ಯೆಯಷ್ಟೇ ಸೀಮಿತವಾಗದೇ ಹೊರಜಗತ್ತಿನಲ್ಲಿ ಕೂಡ ತನ್ನ ಪ್ರತಿಭೆ ವ್ಯಕ್ತಪಡಿಸಲು ಇಂತಹ ವೇದಿಕೆಗಳು ಸಹಾಯಕ ಎಂದರು. ಶ್ರೀ ದಾನೇಶ್ವರಿ ಮಹಿಳಾ ಸಂಘಟನೆ ಅಧ್ಯಕ್ಷರಾಗಿ ಸಮಿತ್ರಾ ಬಾಳಿ, ಖಜಾಂಚಿಯಾಗಿ ರೂಪಾ ಗೋಮಾಡಿ, ಕಾವ್ಯಾ ದಶಮನಿ, ಸಂಘಟನೆಯ ಕುರಿತು ದೀಪಾ ಜಂತಲಿ ಮತ್ತು ರೂಪಾ ಗೋಪಶೆಟ್ಟಿ ಮಾತನಾಡಿದರು. ರಾಜೇಶ್ವರಿ ಬಾಳಿ, ಇಂದಿರಾ ಕದಂ, ಲಲಿತಾ ಕಾಮಶೆಟ್ಟಿ, ವಿದ್ಯಾ ಬಾಳಿ, ರೂಪಾ ಗೋಪಶೆಟ್ಟಿ, ತೇಜಸ್ವಿನಿ ವಿರಕ್ತಮಠ, ಭಾಗ್ಯಶ್ರೀ ಗೋಮಾಡಿ, ಸವಿತಾ ಪಾಟೀಲ, ಕಮಲಾ ದೇವಣಗಾಂವಿ ಮೊದಲಾದವರೂ ಉಪಸ್ಥಿತರಿದ್ದರು, ಕಾರ್ಯಕ್ರಮದ ಪ್ರಾರಂಭದಲ್ಲಿ ಭಾಗ್ಯ ಗೋಮಾಡಿ, ಜ್ಯೋತಿ ಕೋರಿ, ಶೃತಿ ನಾಲವಾಡ ಇವರಿಂದ ಪ್ರಾರ್ಥನೆ ಜರುಗಿತು, ಪೂಜಾ ಗೋಪಶೆಟ್ಟಿ ಸ್ವಾಗತಿಸಿದರು, ಉಮಾಶ್ರೀ ಪೂಜಾರ ನಿರೂಪಿಸಿದರು, ಮಹಾದೇವಿ ಬಾಳಿ ವಂದಿಸಿದರು.