ದಾನಿಶ್ ಟ್ರಸ್ಟ್‌ನಿಂದ 1.60 ಕೋಟಿ ರೂ. ವಿದ್ಯಾರ್ಥಿ ವೇತನ

ಬೆಂಗಳೂರು, ಮಾ.೧೨- ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಶಿಕ್ಷಣ ಕೈಗೊಳ್ಳುತ್ತಿರುವ ಬಡ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ೬೨೪ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ದಾನಿಶ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ೧.೬೦ ಕೋಟಿ ರೂ.ಗಳ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ನಗರದ ದೊಮ್ಮಲೂರು ಮುಖ್ಯರಸ್ತೆಯಲ್ಲಿರುವ ಇಂಡಿಯಾ ಬಿಲ್ಡರ್ಸ್ ನ ಕ್ಲಬ್ ಹೌಸ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಾನಿಶ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಹುಸ್ನಾ ಶರೀಫ್, ಇಂಡಿಯಾ ಬಿಲ್ಡರ್ಸ್ ಕಾರ್ಪೋರೇಷನ್ ಅಧ್ಯಕ್ಷ ಝಿಯಾವುಲ್ಲಾ ಶರೀಫ್ ವಿದ್ಯಾರ್ಥಿ ವೇತನ ವಿತರಿಸಿದರು.
ಅಲ್ಲದೇ, ೨೦೨೪-೨೫ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ವೇತನದ ಮೊತ್ತವನ್ನು ೨ ಕೋಟಿ ರೂ.ಗಳಿಗೆ ಹೆಚ್ಚಿಸುವುದಾಗಿ ಹುಸ್ನಾ ಶರೀಫ್ ಪ್ರಕಟಿಸಿದರು.
ತಿತಿತಿ.ಜಚಿಟಿishಣಡಿusಣ.iಟಿ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯಾದ್ಯಂತ ಸಾವಿರಾರು ಮಕ್ಕಳು ಅರ್ಜಿಸಲ್ಲಿಸಿದ್ದರು.
ಅದರಲ್ಲಿ ೬೨೪ ಮಕ್ಕಳನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ೪೮೦ ಬಿಪಿಎಲ್ ಕಾರ್ಡುದಾರರು, ೨೬ ಮಂದಿ ಅನಾಥರು ಇದ್ದಾರೆ ಎಂದು ಹುಸ್ನಾ ಶರೀಫ್ ಮಾಹಿತಿ ನೀಡಿದರು.
ಎಂಬಿಬಿಎಸ್ ೧೪೦, ಬಿಎಎಂಎಸ್, ಬಿಎಚ್‌ಎಂಎಸ್ ಹಾಗೂ ಬಿಯುಎಂಎಸ್ ೬೨, ದಂತ ವೈದ್ಯಕೀಯ ೯, ವಾಸ್ತುಶಿಲ್ಪ ೫, ಎಂಜಿನಿಯರಿಂಗ್ ೨೦೮, ಕೃಷಿ, ಪಶುವೈದ್ಯಕೀಯ ೧೭, ಕಾನೂನು ೧೪, ಫಿಸಿಯೋಥೆರಪಿ ೨೭, ಫಾರ್ಮಸಿ ೫೦, ಬಿಎಡ್ ೬೯ ವಿದ್ಯಾರ್ಥಿಗಳು ಸೇರಿದಂತೆ ೬೨೪ ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಇಂಡಿಯಾ ಬಿಲ್ಡರ್ಸ್ ಕಾರ್ಪೋರೇಷನ್ ನ ವ್ಯವಸ್ಥಾಪಕ ನಿರ್ದೇಶಕಿ ಹಿನಾ ಶರೀಫ್, ದಾನಿಶ್ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಆಯಿಷಾ ನಯಾಬ್ ಅಹ್ಮದ್, ಸಿಗ್ಮಾ ಫೌಂಡೇಶನ್ ಮುಖ್ಯಸ್ಥ ಅಮಿನ್ ಮುದಸ್ಸರ್, ಸಾಮಾಜಿಕ ಕಾರ್ಯಕರ್ತ ತನ್ವೀರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.