ದಾನಿಗಳಿಂದ ಬಸವೇಶ್ವರ ಮೆಡಿಕಲ್ ಕಾಲೇಜಿಗೆ ಉಚಿತ ಆಕ್ಸಿಜನ್ ಕಾನ್ಸಂಟ್ರೇಟರ್‌

ಚಿತ್ರದುರ್ಗ, ಮೇ – 27 ದೇಶದಲ್ಲಿ ಕೊರೋನಾದಿಂದ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯ ಮತ್ತು ಅಂತಾರಾಜ್ಯಗಳಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ, ಬದುಕಿನಲ್ಲಿ ಭದ್ರತೆ ಇಲ್ಲದ ಮತ್ತು ಎಲ್ಲರನ್ನೂ ಕಳೆದುಕೊಂಡ ಮಕ್ಕಳಿಗೆ ಶ್ರೀಮಠದಲ್ಲಿ ಉಚಿತ ಶಿಕ್ಷಣ ಮತ್ತು ಅನ್ನ ದಾಸೋಹವನ್ನು ಕಲ್ಪಿಸಲಾಗುವುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊರೋನ ಪೀಡಿತರಿಗೆ ತುರ್ತು ಪರಿಸ್ಥಿತಿಯಲ್ಲಿ ಬಳಸಲು ಬೇಕಾದ, ಎಂಟು ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಉಚಿತವಾಗಿ ನೀಡಿದ ನಾಗರಾಜು ಕೆ.ವಿ. ಇಂಜಿನಿಯರ್, ವಿಭಾ ಇಂಕ್ ಎನ್.ಜಿ.ಓ., ಕ್ಯಾಲಿಫೋರ್ನಿಯಾ, ಅಮೆರಿಕ ವತಿಯಿಂದ ಅವರ ಸಹಪಾಠಿಯಾದ ರಾಜೀವ್ ಶೇಖರ್ ಹಾಗು ಶ್ರೀದೇವಿ ಪಲರ್ಚಲ ಮುಖೇನ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ವಿಭಾ ಇಂಕ್ ಸಂಸ್ಥೆಯು ಪ್ರಪಂಚದಾದ್ಯAತ ಇಂತಹ ಅನೇಕ ಜನೋಪಕಾರಿ ಸೇವೆಗಳನ್ನು ಮಾಡುತ್ತಾ ಬಂದಿದ್ದು, ಇಂದು ಆಸ್ಪತ್ರೆಗೆ ಉಚಿತವಾಗಿ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ನೀಡಿರುವುದು ಅನುಕರಣೀಯ. ಕೊರೋನಾ ಮೊದಲ ಅಲೆ ಬಂದಾಗ ಸುಮಾರು ಹತ್ತು ಸಾವಿರ ಜನರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಗಿತ್ತು. ಹಾಗೆಯೇ ಈಗಲೂ ಸಹ ಶ್ರೀಮಠದಿಂದ ಅಸಹಾಯಕ ಸಮುದಾಯಗಳಿಗೆ ಕಿಟ್ ವಿತರಣೆಯನ್ನು ಮುಂದುವರಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕರ‍್ಯದರ್ಶಿ ಎ.ಜೆ.ಪರಮಶಿವಯ್ಯ, ಬಸವೇಶ್ವರ ಆಸ್ಪತ್ರೆಯ ಡೀನ್ ಡಾ. ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ. ಪಾಲಾಕ್ಷಯ್ಯ, ಡಾ. ಶುಭಾ, ಡಾ. ನಾರಾಯಣಮೂರ್ತಿ, ಡಾ. ಸುಧೀಂದ್ರ ಇನ್ನು ಮುಂತಾದವರಿದ್ದರು.