ದಾನಶ್ರೀ ಸೌಹಾರ್ದ ಕ್ರೇಡಿಟ ಸಹಕಾರಿ ಬ್ಯಾಂಕಿನಿಂದ ಆಹಾರ ಕಿಟ್ ವಿತರಣೆ

ವಿಜಯಪುರ, ಜೂ.7-ಲಾಕಡೌನ್ 2ನೇ ಅಲೆಯಿಂದಾಗಿ ಸಂಕಷ್ಟಕ್ಕಿಡಾದ ಸಹಕಾರಿ ಕಡು ಬಡವ ಸದಸ್ಯರನ್ನು ಗುರುತಿಸಿ ಜೊತೆ ಕೊರೋನಾ ನಿಯಂತ್ರಣಕ್ಕಾಗಿ ಜೀವನದ ಹಂಗು ತೊರೆದು ಕರ್ತವ್ಯನಿರತರಾಗಿರುವ ಕರೊನಾ ವಾರೀಯರ್ಸ, ಪೌರ ಕಾರ್ಮಿಕರು, ಖಾಸಗಿ ಶಾಲಾ ಶಿಕ್ಷಕರು, ಬೀದಿ ಬದಿ ವ್ಯಾಪಾಸ್ಥರು ಸರ್ವರನ್ನು ಗುರುತಿಸಿ ಇಂತಹ ಕಠಿಣ ಪರಿಸ್ಥಿಯಲ್ಲಿ ದೈನಂದಿನ ಜೀವನ ನಿರ್ವಹಣೆಗೆ ದಿನಸಿ ಆಹಾರ ಕಿಟ್ ವಿತರಿಸುತ್ತಿರುವದು ಜನ ಮೆಚ್ಚುವ ಕಾರ್ಯವಾಗಿದೆ ಎಂದು ನಾಗಠಾಣ ಮತಕ್ಷೇತ್ರದ ಜನಪ್ರೀಯ ಶಾಸಕರಾದ ದೇವಾನಂದ ಚವ್ಹಾಣರವರು ಅಭಿಪ್ರಾಯಪಟ್ಟರು.
ಆಶ್ರಮ ರಸ್ತೆಯ ದಾನಶ್ರೀ ಸೌಹಾರ್ದ ಸಹಕಾರಿ ಬ್ಯಾಂಕ್ ಮುಂದಗಡೆ ನಡೆದ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿದರು
ಇದೇ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷರಾದ ಅಪ್ಪು ಇಟ್ಟಂಗಿಯವರು ಮಾತನಾಡಿ ಕರೋನಾ 2ನೇ ಅಲೆಯಿಂದಾಗಿ ಕಠಿಣ ಪರಿಸ್ತಿತಿಯಲ್ಲಿ ಕೃಯಲ್ಲಿ ಕೆಲಸವಿಲ್ಲದೆ ಒಂದು ತುತ್ತಿಗೂ ಪರದಾಡುತ್ತಿರುವ ಈ ಸಂಕಷ್ಷದ ಸಮಯದಲ್ಲಿ ನಮ್ಮ ಆಡಳಿತ ಮಂಡಳಿ ಸದಶ್ಯರ ಸಲಹೆ ಮೇರೆಗೆ ಇಂತಹ ಸಮಾಜಮುಖಿ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ನಮ್ಮ ದಾನಶ್ರೀ ಬ್ಯಾಂಕ ಹೆಸರಿಗೆ ತಕ್ಕಂತೆ ದಾನದ ಕಾರ್ಯಮಾಡುವಲ್ಲಿ ಮುಂದೆ ಎಂದರು.
ಈ ಕಾರ್ಯಕ್ರಮದ ಅತಿಥಿಯಾಗಿ ನಗರ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಜಯಶ್ರೀ ಮಸಳಿ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ಎಸ್.ಪಾಟೀಲ್, ನಿರ್ದೆಶಕ ಎಸ್.ಸಿ ನಂದಿ, ಎಸ್.ಸಿ ಪಾಟೀಲ್, ಸಿದ್ದು ಕ್ಯಾತಪ್ಪನವರ, ವಿಜಯ ಜತ್ತಿ ಹಾಗು ಮಹಿಳಾ ಸದಶ್ಯರಾದ ಶ್ರೀಮತಿ ಸುಜಾತಾ ಕತ್ತಿ, ನೀಲಾಂಭೀಕಾ ಚವ್ಹಾಣ ಉಪಸ್ತಿತರಿದ್ದರು.
ಇದೇ ಸಂದಭಘದಲ್ಲಿ ಸದಸ್ಯರಾದ ರುದ್ರಗೌಡ ಪಾಟೀಲ್, ಬಸವರಾಜ ಮರನೂರ, ಶಿವರಾಯಗೋಳ, ಎನ್ ಕೆ ಚಳ್ಳಗಿ, ಭೊರಾವತ, ಎಂ.ಬಿ ಮುಲಿಮನಿ ಹಾಗೂ ತೋನಶ್ಯಾಳ ಹಾಗೂ ಸಿಬ್ಬಂದಿ ವರ್ಗ ಉಪಸ್ತಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಮರನೂರ ನಿರ್ವಹಿದರು.