ದಾನದಿಂದ ಪುಣ್ಯ ಪ್ರಾಪ್ತಿ


ಚನ್ನಮ್ಮನ ಕಿತ್ತೂರ,ಜೂ.25 25 ಎಷ್ಟು ಸಂಪಾದಿಸಿದರೇನು ಮುಂದೊಂದು ದಿನ ಎಲ್ಲವನ್ನು ಇಲ್ಲೇ ಬಿಟ್ಟು ಪಯಣ ಮಾಡುವುದು ನಿಶ್ಚಿತ. ಇದ್ದಾಗಲೇ ದಾನ ಧರ್ಮ ಮಾಡಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕೆಂದು ಶ್ರೀ 108 ಜ್ಞಾನೇಶ್ವರ ಮಹಾರಾಜ ಹೇಳಿದರು.
ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಶ್ರೀ1008 ಪಾಶ್ರ್ವಾನಾಥ ತೀರ್ಥಂಕರ ಜೈನ ಬಸದಿಯ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ಅಂಗವಾಗಿ ನಡೆದ ಕಲಿಕುಂಡ ಆರಾಧನೆ ಮತ್ತು ಯಜಮಾನ ಪದವಿ ಸವಾಲ್ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಆಚಾರ್ಯಾರರು, ಭಗವಂತರು ಹೇಳಿದ್ದಾರೆ. “ಹಸ್ತ್ಯ ಭೂಷಣಂ ದಾನಂ. ದಾನಂ ದುರ್ಘತಿ ನಾಶನಂ” ಮಾಡಿದ ದಾನ ಬ್ಯಾಂಕಿನಲ್ಲಿ ಬ್ಯಾಲೆನ್ಸ ಇದ್ದಂತೆ. ದಾನ ಮಾಡಿದರೆ ಮುಂದಿನ ಭವದಲ್ಲಿ ಚಕ್ರವರ್ತಿಯಾಗುತ್ತಾರೆ. ದಾನ ದುರ್ಗತಿ ನಾಶ ಮಾಡುತ್ತದೆ. ಇಂತಹ ಮಹಾನ್ ಉತ್ಸವದಲ್ಲಿ ಜೈನ ಶ್ರಾವರ-ಶ್ರಾವಕೀಯರು ದಾನ ಮಾಡಿ ಪುಣ್ಯ ಜೀವಿಗಳಾಗಿ ಧರ್ಮದ ಲಾಭ ಪಡೆದುಕೊಳ್ಳಬೇಕೆಂದರು.
ಅತಿಥಿಗಳಾಗಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ನೀವು ಹಮ್ಮಿಕೊಂಡಿದ್ದ ಈ ಪಂಚಕಲ್ಯಾಣ ಪೂಜಾ ಕಾರ್ಯಕ್ರಮಕ್ಕೆ ನಾನು ಸಹ ತನುಮನದಿಂದ ಸಹಾಯ ನೀಡಿ ಜೈನ ಧರ್ಮದ ಅಭಿವೃದ್ಧಿಗೆ ಶ್ರಮಿಸುವೆನೆಂದರು.
ಕ್ಷುಲಕ 105 ಶ್ರೀ ನಂದೀಶ್ವರ ಮಹಾರಾಜರು, ಉಪಾಧ್ಯೆ (ಪಂಡಿತರ) ಬಳಗ, ಶಾವಕ-ಶ್ರಾವಕಿಯರು, ಹಾಗೂ ಸುತ್ತಮುತ್ತಲಿನ ಗುರು-ಹಿರಿಯರು, ಕಮೀಟಿಯವರು, ಪ.ಪಂ. ಸರ್ವ ಸದಸ್ಯರು, ಗ್ರಾಮಸ್ಥರಿದ್ದರು.