ದಾನಗಳಲ್ಲಿ ಶ್ರೇಷ್ಠದಾನ ನೇತ್ರದಾನ- ಶಿವಲಿಂಗಪ್ಪ ಟೆಂಗಳಿ

ಕಲಬುರಗಿ,ಜು.20- ಮನುಷ್ಯನಿಗೆ ಯೋಚನೆಗಳು ಮತ್ತು ಭಾವನೆಗಳು ಶುದ್ಧವಾಗಿದ್ದರೆ ಭಾಗ್ಯಕ್ಕೆ ಕೊರತೆ ಬರುವುದಿಲ್ಲ ಎಂದು ಯುವ ಮುಖಂಡ ಶಿವಲಿಂಗಪ್ಪ ಟೆಂಗಳಿ ಉಪಳಾಂವ ಹೇಳಿದರು.
ನಗರದ ಬಸವೇಶ್ವರ ಆಸ್ಪತ್ರೆ ಆವರಣದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘವು ಹಮ್ಮಿಕೊಂಡಿರುವ ಸಮಾಜ ಸೇವಕ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಹುಟ್ಟುಹಬ್ಬ ಹಾಗೂ 26 ವರ್ಷದ ಸಮಾಜ ಸೇವೆಯ ನಿಮಿತ್ಯ ಸರಣಿ ಕಾರ್ಯಕ್ರಮದ 3ನೇ ಸಮಾರಂಭದಲ್ಲಿ ನೇತ್ರದಾನ ವಾಗ್ದಾನ ಪತ್ರ ನೀಡಿ ಮಾತನಾಡುತ್ತ ಹುಟ್ಟು ಸಹಜ ಸಾವು ಅನಿವಾರ್ಯ ಹುಟ್ಟು ಸಾವಿನ ಮಧ್ಯದಲ್ಲಿ ಮಾಡುವ ಕಾರ್ಯ ಉತ್ತಮ. ನೇತ್ರದಾನ ಮಾಡುವುದು ಸಾವಿನ ನಂತರ ಮಾಡುವ ಅತ್ಯುತ್ತಮ ಕಾರ್ಯವಾಗಿದೆ. ಮನುಷ್ಯನಲ್ಲಾಡುವ ಉಸಿರು ನಿಂತ ಬಳಿಕ ಈ ಶರೀರ ಮಣ್ಣಿನಲ್ಲಿ ಮಣ್ಣಾಗಿ ಹೋಗುವ ಬದಲು ಪರರಿಗೆ ಬೆಳಕಾಗುವದು ಪವಿತ್ರ ಕಾರ್ಯ ಎನಿಸುತ್ತದೆ. ನೇತ್ರದಾನ, ಶರೀರ ದಾನ ಮಾಡಿ ಪರೋಪಕಾರಿ ಆಗಬೇಕೆಂದು ಮಾರ್ಮಿಕವಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ದಿಲೀಪ ಕುಮಾರ ಭಕ್ರೆ, ಚಿತ್ರಕಲಾ ಅಡಕಿ, ಜನಪದ ಕಲಾವಿದ ರಾಜು ಹೆಬ್ಬಾಳ, ಶಶಿಕಾಂತ ಹೀರಾಪುರ್ಸಿ ನೇತ್ರದಾನ ವಾಗ್ದಾನ ಪತ್ರ ನೀಡಿದರು. ರಘುನಂದನ ಕುಲಕರ್ಣಿ, ಶಿವಯ್ಯ ಹಿರೇಮಠ, ಶ್ರೀದೇವಿ ಎಚ್ ಅಟ್ಟೂರ, ಹಣಮಂತರಾಯ ಅಟ್ಟೂರ, ಯಶವಂತರಾಯ ಕೌಲಗಿ,ಸಂತೋಷ ಸೇರಿದಂತೆ ಇತರರು ಉಪಸ್ಥಿತರಿದ್ದರು.