ದಾನಗಳಲ್ಲಿ ಶ್ರೇಷ್ಠದಾನ ಅನ್ನದಾನ

ಹರಿಹರ.ಜು.8;  ಲಾಕ್ ಡೌನ್ ಸಂದರ್ಭದಲ್ಲಿ  ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ಹಸಿದವರಿಗೆ ಅನ್ನ ನೀಡುವವರೇ ದೇವರು ಎಂದು ಶಿಕ್ಷಕ ಶರಣ್ ಕುಮಾರ್ ಹೆಗ್ಡೆ ಹೇಳಿದರು ಮಹಾತ್ಮಾ ಗಾಂಧಿ ವೃತ್ತದಲ್ಲಿ ದಿ ಹೆಲ್ಪಿಂಗ್ ಗ್ರೂಪ್ ಚಾರಿಟೇಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಬೆಳಗಿನ ಉಪಾಹಾರದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಯಿತು ಈ ವೇಳೆ ಮಾತನಾಡಿದ ಅವರು  ಮಹಾಮಾರಿ ವೈರಸ್ ನಿಯಂತ್ರಣಕ್ಕೆ ತರುವುದಕ್ಕೆ ಸರ್ಕಾರ ಲಾಕ್ ಡೌನ್ ಮಾಡಿದ ಪರಿಣಾಮ ಬಡ ಮಧ್ಯಮ ವರ್ಗದವರು ಕೂಲಿ ಕಾರ್ಮಿಕರಿಗೆ ಊಟಕ್ಕೂ ಪರದಾಡುವ ಪರಿಸ್ಥಿತಿ ಕಂಡು ಸಂಸ್ಥೆಯ ಬಳಗದವರು ಕಳೆದ ವಾರದಿಂದಲೂ ಅನ್ನಸಂತರ್ಪಣೆ ಮಾಡುವ ಪುಣ್ಯ ಕಾರ್ಯಕ್ಕೆ ಮುಂದಾಗಿದ್ದಾರೆ .ಇಂಥ ಪುಣ್ಯ ಕಾರ್ಯ ಶ್ಲಾಘನೀಯವಾದದ್ದು ಎಂದರು   ಇತ್ತೀಚೆಗೆ ಮಲೇಬೆನ್ನೂರು ಪುರಸಭೆಯ ಪೌರ ಕಾರ್ಮಿಕರಿಗೆ ಅಧಿಕಾರಿಗಳಿಗೆ ಸಿಬ್ಬಂದಿ ವರ್ಗದವರಿಗೆ ಪೇಸ್ ಶೀಲ್ಡ್. ಹ್ಯಾಂಡ್ ಗ್ಲೌಸ್. ಸ್ಯಾನಿಟೈಜರ್  .ಮಾಸ್ಕೋ ಇತರೆ ವೈರಸ್ ನಿಂದ ಸುರಕ್ಷತೆಗೆ ಸಲಕರಣೆ ಸಾಮಗ್ರಿ ಗಳನ್ನು ನೀಡಿದ್ದೇವೆ  ಕೋವಿಡ್ 19 ಸಂಕಷ್ಟದಲ್ಲಿ ಬಳಲುತ್ತಿದ್ದವರಿಗೆ ಆಹಾರ ಧಾನ್ಯದ ಕಿಟ್ ಇತರೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ನೊಂದವರಿಗೆ ನೆರವಾಗುವಂಥ ಕಾರ್ಯವನ್ನು ನಮ್ಮ ಸಂಸ್ಥೆ ಮಾಡಿದೆ ಎಂದು ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಈ ಹಿನ್ನೆಲೆಯಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದರು ಮಂಜುನಾಥ್ ಗೌಡ .ನಾಗರಾಜ್. ಸಿಎಂ ಹನುಮಂತಪ್ಪ. ವೀರೇಶ್. ಕೃಷ್ಣ .ಮಾಲತೇಶ್. ಬಾಬಾಜಿ .ವೆಂಕಟೇಶ್. ವೀರಣ್ಣ .ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಡಿ ಟಿ ಶ್ರೀನಿವಾಸ್ .ಹಾಗೂ ಟ್ರಸ್ಟಿನ ಸದಸ್ಯರುಗಳು ಅನ್ನಸಂತರ್ಪಣೆ ಕಾರ್ಯದಲ್ಲಿ ಇದ್ದರು