ದಾನಗಳಲ್ಲಿಯೇ ಶ್ರೇಷ್ಠದಾನ ರಕ್ತದಾನ

ಮಾನ್ವಿ.ಏ.೧೭-ರಕ್ತದಾನದಿಂದ ಮತ್ತೋಬ್ಬರ ಪ್ರಾಣ ರಕ್ಷಿಸಿದಂತಾಗುತ್ತದೆ ಮತ್ತು ಮಹಾದಾನ ರಕ್ತದಾನದಿಂದ ಆರೋಗ್ಯ ವೃದ್ದಿಗೆ ವರದಾನವಾಗುವ ರಕ್ತದಾನ ಶ್ರೇಷ್ಠದಾನ ಎಂದು ಮಾನ್ವಿ ತಾಲೂಕಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹೆಚ್. ಶರ್ಪುದ್ದೀನ ಪೋತ್ನಾಳ ಹೇಳಿದರು. ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಎಪಿಜೆ ಅಬ್ದುಲ್ ಕಲಾಂ ಮುಸ್ಲಿಂ ಯುವಕರ ಸಂಘದಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಸ್ವತಹ ತಾವು ರಕ್ತದಾನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನ್ಮರಣ ನಡುವೆ ಮತ್ತು ಅಪಘಾತ ಹಾಗೂ ಇನ್ನಿತರ ತುರ್ತು ಸಂಧರ್ಬಗಳಲ್ಲಿ ಆಪತ್ಕಾಲದಲ್ಲಿರುವ ವ್ಯಕ್ತಿಗಳಿಗೆ ಮತ್ತು ಬಡವರು, ದುರ್ಬಲ ವರ್ಗದ ಜನರು ತುರ್ತಾಗಿ ರಕ್ತ ಪಡೆಯಲು ಹಣಕಾಸಿನ ತೊಂದರೆ ಇರುವವರಿಗೆ ರಕ್ತದ ಅವಶ್ಯಕತೆಯಿದ್ದಾಗ ರಕ್ತದಾನ ಶಿಬಿರಗಳಿಂದ ಸಂಗ್ರಹಿಸಿದ ರಕ್ತವು ಸಹಕಾರಿಯಾಗಲಿದೆ ಎಂದರು.
೧೮ ರಿಂದ ೬೦ ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಪ್ರತಿ ೩ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಈ ರಕ್ತದಾನದಿಂದ ನಿಮ್ಮ ಆರೋಗ್ಯ ಹಾಗೂ ದೇಹದ ಲವಲವಿಕೆ ಕಾಣಬಹುದು ಜೊತೆಗೆ ಇನ್ನೂಬ್ಬರ ಬಾಳಿಗೆ ಬೆಳಕಾಗುವಂತಹ ಮಹಾತ್ಕಾರ್ಯಕ್ಕೆ ಮುಂದಗಿರುವ ಎಪಿಜೆ ಅಬ್ದುಲ್ ಕಲಾಂ ಮುಸ್ಲಿಂ ಯುವಕರ ಸಂಘಟಿಕರ ಕಾರ್ಯ ಶ್ಲಾಘನೀಯ ಎಂದು ಹೆಚ್. ಶರ್ಪುದ್ದೀನ ಪ್ರಶಂಸೆ ವ್ಯಕ್ತಪಡಿಸಿದರು.
ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಸರಾಗವಾದ ರಕ್ತ ಸಂಚಲನೆ ಹಾಗೂ ಜ್ಙಾಪಕಶಕ್ತಿ, ಕೊಬ್ಬಿನಾಂಶ ಕಡಿಮೆ ಜೊತೆಗೆ ರಕ್ತದೊತ್ತಡ, ಹೃದಯಾಘಾತದಂತಹ ಅವಘಡಗಳು ಸಂಭವಿಸದಂತೆ ತಡೆಯುತ್ತದೆ ಎಂದು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದ ಡಾ.ಗುರುಶರ್ಮಾ ಹೇಳಿದರು.
ಇನ್ನೊಬ್ಬ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಗ್ರಾಮದ ಯುವ ಮುಖಂಡರಾದ ನವೀನ್ ನಾಡಗೌಡ ಮಾತನಾಡುತ್ತ ಯುವಕರ ಈ ಮಹತ್ಕಾರ್ಯವನ್ನು ಶ್ಲಾಘಿಸುತ್ತ ಇನ್ನೂ ಹೆಚ್ಚಿನ ಸಾಮಾಜೀಕ ಸೇವೆ ಯುವಕರಿಂದ ನಡೆಯಲಿ ಎಂದು ಶುಭ ಹಾರೈಸಿದರು.
ಈ ವೇಳೆ ಮುಖಂಡರಾದ ಶಿವುಕುಮಾರ ಗುಜ್ಜಲ್, ಶಿವುಕುಮಾರ ರಾಯಚೂರು, ಜಾಮೀಯ ಮಜೀದನ ಮೌಲಾನ್ ರಾಶೀದ್ ಜಮಾಲ್, ಬಸವರಾಜ ಉರ್‍ಲಗಡ್ಡಿ, ಖಾನ್ ಸಾಬ್, ಟಿಪ್ಪು ಸುಲ್ತಾನ, ಚನ್ನಪ್ಪ ಚಲುವಾದಿ, ಎಮ್.ಪಿ. ಶರೀಫ್, ಮೋದೀನ್ ಸಾಬ, ಜೆ.ಹುಸೇನ್ ಬಾಷ, ಜೆ.ಫಕೀರ ಸಾಬ, ರಫೀ, ಪಂಪಣ್ಣ, ಈರಣ್ಣ, ರಾಚಪ್ಪ, ಶರಣಪ್ಪ ಇಸ್ಮಾಯಿಲ್ ಆಪೀಜ್ ಸಾಬ, ಜಾಕೀರ್ ಪಾಷ, ಮನಸೂರ, ರಬ್ಬನಿ ಖಾದ್ರಿ, ಇರ್ಷಾದ್ ಖುರೇಷಿ, ಬಂದೇ ನವಾಜ್ ಇ, ಶುಕೂರ್, ಖಾಸಿಂ ಅಲಿ, ರಾಜಾ ಮೇಸ್ತ್ರಿ, ಸಮದಾನಿ, ಕಬೀರ್ ಖುರೇಷಿ ಸೇರಿದಂತೆ ಅನೇಕ ಮುಖಂಡರು, ಎಪಿಜೆ ಅಬ್ದುಲ್ ಕಲಾಂ ಮುಸ್ಲಿಂ ಯುವಕರ ಸಂಘದ ಪದಾಧಿಕರಿಗಳು ಇದ್ದರು.