ದಾದಿಯರ ಸೇವೆ ಸ್ಮರಣೀಯ

ಇಂಡಿ:ಮೇ.19:ತಾಯಿ ಮಗುವಿನ ಆರೈಕೆ ಯಾವ ರೀತಿ ಮಾಡುತ್ತಾರೆಯೋ ಅದೇ ರೀತಿ ದಾದಿಯರು ಕೂಡ ಆಸ್ಪತ್ರೆಗೆ ಬರುವಂತಹ ರೋಗಿಗಳನ್ನು ಮಗುವಿನಂತೆ ಆರೈಕೆ ಮಾಡುವ ಸಂಸ್ಕಾರವನ್ನು ಬೆಳೆಸಿಕೊಂಡು ಉತ್ತಮ ಚಿಕಿತ್ಸೆ ನೀಡಿದರೆ ರೋಗಿ ಗುಣ ಮುಖವಾಗಲಿದ್ದು ನಿಮ್ಮ ಸೇವೆ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದು ವೈದ್ಯಾಧಿಕಾರಿ ಡಾ|| ರಾಜೇಶ ಕೋಳೆಕರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಾ ಆರೋಗ್ಯ ಕೇಂದ್ರ ಇಲಾಖೆಯಿಂದ ಆಯೋಜಿಸಿದ ವಿಶ್ವ ದಾದಿಯರ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಡಾ|| ಪ್ರೀತಿ ಕೋಳೆಕರ ಮಾತನಾಡಿ ಸರಕಾರಿ ಆಸ್ಪತ್ರೆ ಎಂಬ ಕಿಳುರಮೆ ಬಿಟ್ಟು ತಾಳ್ಮೆಯಿಂದ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದರೆ ರೋಗ ಗುಣಮುಖವಾಗಲಿದೆ. ಸರಕಾರಿ ಆಸ್ಪತ್ರೆ ಕೂಡ ಉತ್ತಮ ಸೇವೆ ನೀಡುತ್ತಿದ್ದು ಬಡ ರೋಗಿಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿ ಸೇವೆ ಮಾಡುತ್ತಿದ್ದಾರೆ ಎಂದರು.

ಡಾ|| ಸಂತೋಷ ಪವಾರ,ಶುಶ್ರೂಕರ ಅಧಿಕಾರಿ ವಿಜಯಲಕ್ಷ್ಮೀ ಬಿರಾದಾರ, ನಾಜಿಯಾ ಕಾಖಂಡಕಿ, ವಿಜಯಲಕ್ಷ್ಮೀ ಹಾದಿಮನಿ, ರೇಣುಕಾ ಬಡಿಗೇರ,ಗಿರಿಜಾ ಬಜಂತ್ರಿ ಮಾತನಾಡಿದರು.

ತಹಸೀನಾ ಮೋಮಿನ್,ಕಾಮಣ್ಣ ದಶವಂತ,ರವಿ ಹಾದಿಮನಿ, ,ಮೇಘಾ ಪೋದ್ದಾರ,ವಿಜಯಕುಮಾರ ಪೋಳ,ಮಝುನಾಥ ಮಠ,ಡಾ|| ಜಗದೀಶ ಬಿರಾದಾರ,ಡಾ|| ಅಮೀತ ಕೋಳೆಕರ, ಡಾ|| ವಿಪುಲ್ ಕೋಳೆಕರ ಮತ್ತಿತರಿದ್ದರು.