ದಾದಿಯರ ಸೇವೆ ಅನನ್ಯ : ಡಾ. ರಾಜೇಶ ಕೋಳೆಕರ

ಇಂಡಿ: ಮೇ.14:ಕೋವಿಡ್ ಹಾಗೂ ಯಾವುದೇ ತುರ್ತು ಸಂದರ್ಭದಲ್ಲಿ ದಾದಿಯರ ಸೇವೆ ಅವಿಸ್ಮರಣೀಯ ವಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ರಾಜೇಶ ಕೋಳೆಕರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಾ ಆರೋಗ್ಯ ಕೇಂದ್ರ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ದಾದಿಯರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ|| ಪ್ರೀತಿ ಕೋಳೆಕರ ಮಾತನಾಡಿ ದಾದಿಯರು ಮುಂದಿನ ಪೀಳಿಗೆ ನೂರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುವದು ಹೆಮ್ಮೆಯ ವಿಚಾರ ಎಂದರು.

ನಾಜಿಯಾ ಕಾಖಂಡಕಿ ಮಾತನಾಡಿ ಇಂದು ವಿಶ್ವ ದಾದಿಯರ ದಿನ ಎಂದು ಕರೆಯಲಾಗುತ್ತಿದೆ. ಹಿಂದಿನವರ ಸೇವೆ ಗುರುತಿಸಿ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಇವರ ಸೇವೆ ಜಗತ್ತಿನಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೆಚ್ಚು ಮಹತ್ವ ಪಡೆದಿದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜೀವ ಉಳಿಸುವ ಕೆಲಸದಲ್ಲಿ ತೊಡಗಿದ್ದು ಸಾಮಾನ್ಯ ವಿಷಯವಲ್ಲ ಎಂದರು.

ವಿಜಯಲಕ್ಷ್ಮೀ ಬಿರಾದಾರ, ರೇಣುಕಾ ಬಡಿಗೇರ, ಜ್ಯೋತಿ ಲಚ್ಯಾಣ, ಗಿರಿಜಾ ಬಜಂತ್ರಿ, ತಹಿಸೀನಾ ಮೋಮಿನ್, ಕಾಮಣ್ಣ ದಶವಂತ, ರವಿ ಹಾದಿಮನಿ, ಡಾ|| ಅನೀಲ ವಾಲಿ, ಡಾ|| ವಿಪುಲ್ ಕೋಳೆಕರ, ಡಾ|| ಅಮೀತ ಕೋಳೆಕರ ಮತ್ತಿತರಿದ್ದರು.