ದಾಖಲೆ ಸಲ್ಲಿಸಿ ಯೋಜನೆ ಬಳಸಿಕೊಳ್ಳಿ

ದೇವದುರ್ಗ,ಜೂ.೧೯-
ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳು ನೆಮ್ಮದಿ ಕೇಂದ್ರದಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು ಎಂದು ತಹಸೀಲ್ದಾರ್ ಕೆ.ವೈ.ಬಿದರಿ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದ ನೆಮ್ಮದಿ ಕೇಂದ್ರದಲ್ಲಿ ಗೃಹಜ್ಯೋತಿ ಆನ್‌ಲೈನ್ ಅರ್ಜಿ ಸಲ್ಲಿಸುವ ಯೋಜನೆಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಸರ್ಕಾರ ನಿಗದಿ ಮಾಡಿರುವ ದಾಖಲೆಗಳನ್ನು ನೆಮ್ಮದಿ ಕೇಂದ್ರದಲ್ಲಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಪಡಿತರ ಫಲಾನುಭವಿಗಳು ಯೋಜನೆ ಪಡೆಯಲು ಅರ್ಹರು ಎನ್ನುವ ಮಾನದಂಡ ಹಾಕಿದೆ. ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಕೆ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.
ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಶಿರಸ್ತೇದಾರ್ ಗೋವಿಂದ ನಾಯಕ, ಬಸವರಾಜ ಪೂಜಾರಿ, ಕೃಷ್ಣ, ಪ್ರಕಾಶಗೌಡ, ಗಣೇಶ, ಮುಖಂಡರಾದ ಎಚ್.ಶಿವರಾಜ, ಇಕ್ಬಾಲ್‌ಸಾಬ್ ಇತರರಿದ್ದರು.