ದಾಖಲೆ ರಹಿತ 6.78 ಲಕ್ಷ ರೂ ಮೌಲ್ಯದ ಮದ್ಯ ವಶಕ್ಕೆ


ಗದಗ, ಏ.15: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಜರುಗಿದ ದಾಳಿಯಲ್ಲಿ ಅಂದಾಜು 6.78 ಲಕ್ಷ ರೂ. ಮೌಲ್ಯದ ದಾಖಲೆ ರಹಿತ ಮದ್ಯ ದಾಸ್ತಾನು ವಶಕ್ಕೆ ಪಡೆಯಲಾಗಿದೆ.
ಗದಗ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಏ.13 ರಂದು ನರಗುಂದ ಪಟ್ಟಣದ ನವಲಗುಂದ ರಸ್ತೆಯಲ್ಲಿರುವ ಶಾಂತಿ ಪಾರ್ಕ ಸಿಎಲ್-2, ಅನೀರಿಕ್ಷಿತ ದಾಳಿ ವೇಳೆ ಜರುಗಿದ ತಪಾಸಣಾ ಸಮಯದಲ್ಲಿ ಲೆಕ್ಕದ ಪುಸ್ತಕದಲ್ಲಿ ನಮೂದಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮದ್ಯ ದಾಸ್ತಾನು ಮಾಡಿರುವದು ಕಂಡು ವಶಕ್ಕೆ ಪಡೆಯಲಾಗಿರುತ್ತದೆ. ತಪಾಸಣಾ ಸಮಯದಲ್ಲಿ ವಿವಿಧ ಬ್ರ್ಯಾಂಡನ್ 24,475 ರೂ. ಮೌಲ್ಯದ 91.640 ಲೀ. ಬೀಯರ್ ಭೌತಿಕ ದಾಸ್ತಾನು ಲೆಕ್ಕದ ಪುಸ್ತಕದಲ್ಲಿ ನಮೂದಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದು ಹಾಗೂ ರೂ. 6,54,362 ರೂ. ಮೌಲ್ಯದ 772.960 ಲೀ. ಮದ್ಯ ಒಟ್ಟಾರೆ 6,78,837 ಲಕ್ಷ ರೂ. ಮೌಲ್ಯದ ದಾಖಲೆ ರಹಿತ ಮದ್ಯ ಹಾಗೂ ಬಿಯರ ದಾಸ್ತಾನನ್ನು ವಶಕ್ಕೆ ಪಡೆದು ಸಂಬಂಧಿಸಿದವರ ಮೇಲೆ ಅಬಕಾರಿ ಕಾಯ್ದೆ ಉಲ್ಲಂಘನೆಯಡಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ದಾಳಿ ಸಂದರ್ಭದಲ್ಲಿ ಅಬಕಾರಿ ಉಪ ಆಯುಕ್ತ ಭರತೇಶ, ಅಬಕಾರಿ ಇನ್ಸಪೆಕ್ಟರ ಹಾಗೂ ಸಿಬ್ಬಂದಿಗಳು ಹಾಜರಿದ್ದರು.