ಗದಗ, ಏ.17: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಜರುಗಿದ ದಾಳಿಯಲ್ಲಿ ಅಂದಾಜು 34689 ರೂ ಮೌಲ್ಯದ ದಾಖಲೆ ರಹಿತ ಮದ್ಯ ವಶಕ್ಕೆ ಪಡೆಯಲಾಗಿದೆ.
ಗದಗ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಏ.15 ರಂದು ರಾತ್ರಿ 8.30 ಗಂಟೆಗೆ ಕುರ್ತಕೋಟಿ ಗ್ರಾಮದ ನಿವಾಸಿಗಳಾದ ಮಂಜುನಾಥ ಫ ಗಣಾಚಾರಿ ಹಾಗೂ ಮಂಜುನಾತ ನಿಂಬಣ್ಣ ನೀಲಗುಂದ ಎಂಬುವವರು ಮುಳಗುಂದ ಪಟ್ಟಣ ಪಂಚಾಯತ ವ್ಯಾಪ್ತಿಯ ಕುರ್ತಕೋಟಿ ಗ್ರಾಮಕ್ಕೆ ತೆರಳುವ ಸಂಧರ್ಭದಲ್ಲಿ ಬಡ್ನಿಯವರ ಆಯಿಲ್ ಮಿಲ್ ಹತ್ತಿರ ಗಸ್ತು ಕಾರ್ಯನಿರ್ವಹಿಸುತ್ತಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳು ಅಕ್ರಮವಾಗಿ ಸಾಗುತ್ತಿದ್ದ 34,869 ರೂ. ಮೌಲ್ಯದ 88.200 ಲೀ ಮದ್ಯ, ಅಂದಾಜು 5 ಲಕ್ಷ ರೂ. ಮೌಲ್ಯದ ವಾಹನ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.