ದಾಖಲೆ ರಹಿತ ನಗದು, ಸಾಮಾಗ್ರಿ ದೊರೆತರೆ ಕ್ರಮ ಜರುಗಿಸಲು ಸೂಚನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.04:  ತಾಲೂಕಿನ ಜಂಗಮರ್ ಕಲ್ಗುಡಿ ಗ್ರಾಮದ ಹೊರವಲಯದ ಚೆಕ್ ಪೊಸ್ಟ್ ಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ದಿಢೀರ್ ಭೇಟಿ ನೀಡಿ ಕೆಎಸ್ ಆರ್ ಟಿಸಿ ಬಸ್ ಏರಿ ಪರಿಶೀಲನೆ ನಡೆಸಿದರು.
ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಕರ ಬ್ಯಾಗ್ ಗಳು, ಸರಕು ಸಾಗಣೆ ವಾಹನಗಳ ಕಂಟೇನರ್ , ಇ-ವೇ ಬಿಲ್ ಗಳು ಹಾಗೂ ಕಾರ್ ಗಳ ಪರಿಶೀಲನೆ ಖುದ್ದಾಗಿ ನಡೆಸಿದರು. ನೀತಿ ಸಂಹಿತೆ ಜಾರಿಯಲ್ಲಿದ್ದು ಕಾರ್, ಬಸ್, ಟಾಟಾಏಸ್ ಹಾಗೂ ಅನುಮಾಸ್ಪದ  ಗಳು ಹಾಗೂ ಇತರೆ ವಾಹನಗಳ ತಪಾಸಣೆ ಮಾಡಬೇಕು. ತಾಲೂಕಿನಲ್ಲಿ ಮೂರು ಚೆಕ್ ಪೊಸ್ಟ್ ತೆರೆಯಲಾಗಿದೆ. ದಾಖಲೆಗಳಿಲ್ಲದೇ ನಗದು, ಚಿನ್ನಾಭರಣ, ಸಾಮಾಗ್ರಿ, ಮಧ್ಯ ಹಾಗೂ ವಾಣಿಜ್ಯ ಸರಕುಗಳನ್ನು ಸಾಗಣೆ ಮಾಡುವುದನ್ನು ಪರಿಶೀಲಿಸಬೇಕು. ದಾಖಲೆ ರಹಿತ ಸಾಮಾಗ್ರಿ, ನಗದು ದೊರೆತರೆ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಚೆಕ್ ಪೊಸ್ಟ್ ಸಿಬ್ಬಂದಿಗಳಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಅವರು ಸೂಚಿಸಿದರು. ಈ ವೇಳೆ ಚೆಕ್ ಪೊಸ್ಟ್ ಅಧಿಕಾರಿಗಳಾದ ಮಲ್ಲಿಕಾರ್ಜುನ, ಪೊಲೀಸ್ ಸಿಬ್ಬಂದಿಗಳಾದ ಭೀಮಪ್ಪ ಮೇಟಿ, ಮಂಜುನಾಥ ಇದ್ದರು.
ಮತಗಟ್ಟೆ ಕೇಂದ್ರಗಳ ವೀಕ್ಷಣೆ : ತಾಲೂಕಿನ ಹೊಸಕೇರಾ, ಶ್ರೀರಾಮನಗರ, ಮರಳಿ, ಆನೆಗೊಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ  ಮತಗಟ್ಟೆ ಕೇಂದ್ರಗಳಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಅವರು ಭೇಟಿ ಸೌಲಭ್ಯ ಪರಿಶೀಲಿಸಿದರು. ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಇರಬೇಕು. ವಿಕಲಚೇತನರಿಗೆ ಕಲ್ಪಿಸಿರುವ ರ್ಯಾಂಪ್ ವ್ಯವಸ್ಥೆ ಪರಿಶೀಲಿಸಿದರು. ಮತದಾನಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚನೆ ನೀಡಿದರು. ಈ ವೇಳೆ ವಿವಿಧ ಗ್ರಾ.ಪಂ. ಪಿಡಿಓಗಳಾದ ಕಿರಣ್ ಕುಮಾರ್, ಕೃಷ್ಣಪ್ಪ,  ಶರಣಮ್ಮ ಇದ್ದರು.