
ಗದಗ ಏ.9: ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಏಪ್ರೀಲ್ 8 ರಂದು ಪೆÇೀಲಿಸ್, ಎಸ್.ಎಸ್.ಟಿ ಹಾಗೂ ಅಬಕಾರಿ ತಂಡಗಳ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ದಾಖಲೆ ರಹಿತ ನಗದು, ಮದ್ಯ ಹಾಗೂ ಲಕ್ಷಾಂತರ ರೂ ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ನಗರದ ಹೊರವಲಯದ ದಂಡೀನ ದುರ್ಗಮ್ಮ ರಸ್ತೆಯಲ್ಲಿರುವ ಚೆಕ್ ಪೆÇೀಸ್ಟನಲ್ಲಿ ತಪಾಸಣೆ ವೇಳೆ ಗಜೇಂದ್ರಗಡ ದಿಂದ ಗದಗ ಬರುವ ವ್ಯಕ್ತಿಯೋರ್ವನಿಂದ ದಾಖಲೆ ರಹಿತ 5.50 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ನಗರದ ಮುಳಗುಂದ ರಸ್ತೆಯಲ್ಲಿರುವ ಕುಟೀರ ಚೆಕ್ ಪೆÇೀಸ್ಟನಲ್ಲಿ ಡಂಬಳ ದಿಂದ ಗದಗ ಬರುವ ಸಂದರ್ಭದಲ್ಲಿ ವ್ಯಕ್ತಿಯೋರ್ವನದಿಂದ ದಾಖಲೆ ರಹಿತ 2,18,500 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ಗದಗ ಗ್ರಾಮೀಣ ಪೆÇೀಲಿಸ್ ಠಾಣೆ ವ್ಯಾಪ್ತಿಯ ಬಿಂಕದಕಟ್ಟಿ ಹೆದ್ದಾರಿ ಹತ್ತಿರ ದಾಖಲೆ ರಹಿತ ಆಂದ್ರಪ್ರದೇಶದ ಕಡಪ ದಿಂದ ಹುಬ್ಬಳ್ಳಿಗೆ ಹೊರಟ್ಟಿದ ವಾಹನ ತಪಾಸಣೆ ವೇಳೆ ದಾಖಲೆ ರಹಿತ 8 ಲಕ್ಷ ಮೌಲ್ಯದ 78 ರೇಷ್ಮೆ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಪೆÇೀಲಿಸ್ ತಂಡದ ಕಾರ್ಯಾಚರಣೆಯಲ್ಲಿ ಶಿರಹಟ್ಟಿ ಪೆÇೀಲಿಸ್ ಠಾಣಾ ವ್ಯಾಪ್ತಿಯ ಶಿವಾಜಿ ನಗರ(ಮಜ್ಜೂರ ತಾಂಡಾದಲ್ಲಿ) ಅಕ್ರಮವಾಗಿ ಸಂಗ್ರಹಿಸಲಾದ 27000 ರೂ. ಮೌಲ್ಯದ 69.12 ಲೀ ಮದ್ಯವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಾಗಿರುತ್ತದೆ. ಏಪ್ರಿಲ್ 7 ರಂದು ರಾತ್ರಿ 8 ಗಂಟೆಗೆ ಮುಳಗುಂದ ಪಟ್ಟಣದಿಂದ ಕುರ್ತಕೋಟಿ ಗ್ರಾಮದ ರಸ್ತೆಯಲ್ಲಿ ಅಂತೂರ ಗ್ರಾಮದ ಮಾರುತಿ ಶಂಕರಪ್ಪ ಹರಣಶಿಕಾರಿ ಅವರು ದ್ವಿಚಕ್ರ ವಾಹನದಲ್ಲಿ ಪರವಾನಿಗೆ ರಹಿತ 10,117 ರೂ. ಮೌಲ್ಯದ 25.92 ಲೀ ಮದ್ಯವನ್ನು ಅಕ್ರಮ ಸಾಗಾಟ ಮಾಡುವ ಸಂದರ್ಭದಲ್ಲಿ ಹಾಗೂ ರಾತ್ರಿ 9.45 ಗಂಟೆತೆ ಮುಂಡರಗಿ ತಾಲೂಕಿನ ಕೆಳೂರ-ಹಾರೋಗೆರಿ ರಸ್ತೆ ಮಧ್ಯದಲ್ಲಿ ಹನುಮಪ್ಪ ಬೇವಿನಕಟ್ಟ ಇವರು ದ್ವಿಚಕ್ರ ವಾಹನದ ಮೂಲಕ 13,490 ರೂ.ಮೌಲ್ಯದ 34.56 ಲೀ ಅಕ್ರಮ ಮದ್ಯ ಸಾಗಾಟ ವೇಳೆ ಅಕ್ರಮ ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.