
ಮುಂಬೈ, ಮಾ ೫- ಭಾರೀ ಟೀಕೆ ಮತ್ತು ವಿವಾದ ಎದುರಿಸಿದ್ದ ಶಾರುಖ್ ಖಾನ್ ಅವರ ಪಠಾನ್ ಚಿತ್ರ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಗಳಿಕೆಯಲ್ಲಿ ಮುಂದಿರುವ ಪಠಾಣ್ ಚಿತ್ರ ಈಗ “ಭಾರತದಲ್ಲಿ ನಂ ೧ ಹಿಂದಿ ಚಲನಚಿತ್ರ ಆಗಿದೆ. ಪಠಾಣ್ ನಂತರ ಬಾಹುಬಲಿ: ದಿ ಕನ್‌ಕ್ಲೂಷನ್, ಕೆಜಿಎಫ್: ೨ (ಹಿಂದಿ ಡಬ್) ಮತ್ತು ಅಮೀರ್ ಖಾನ್ ಅವರ ದಂಗಲ್ ಚಿತ್ರಗಳಿವೆ.
ಇಲ್ಲಿವರೆಗೆ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ೧೦೨೮ ಕೋಟಿ ಗಳಿಸುವ ಮೂಲಕ ಭಾರತದಲ್ಲಿ ಸಾರ್ವಕಾಲಿಕವಾಗಿ ಗರಿಷ್ಠ ಗಳಿಕೆ ಕಂಡ ಹಿಂದಿ ಚಲನಚಿತ್ರವೆಂಬ ದಾಖಲೆ ಬರೆದಿದೆ ಎಂದು ಯಶ್ ರಾಜ್ ಫಿಲ್ಮ್ಸ್ ಹೇಳಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಭಾರತದಲ್ಲಿ ಬಿಡುಗಡೆಗೊಂಡ ೬ನೇ ಶುಕ್ರವಾರ ೧.೦೭ ಕೋಟಿ ನಿವ್ವಳ ಗಳಿಕೆ ಕಂಡಿದೆ.
‘ಬಿಡುಗಡೆ ದಿನದಿಂದಲೂ ಜನರ ಮೆಚ್ಚುಗೆಗೆ ಪಾತ್ರವಾದ ಚಿತ್ರ ೩೯ ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟು ೧೦೨೮ ಕೋಟಿ (ಭಾರತದಲ್ಲಿ ೬೪೧.೫೦ ಕೋಟಿ, ಸಾಗರೋತ್ತರ: ೩೮೬.೫೦ ಕೋಟಿ) ಗಳಿಸಿದೆ ಎಂದು ವೈಆರ್‌ಎಫ್ ಪ್ರಕಟಣೆ ತಿಳಿಸಿದೆ.
ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ವರದಿ ಮಾಡಿದ್ದಾರೆ. ಈ ವಾರ ೧.೫ ಕೋಟಿ ಗಳಿಸಿರುವ ಚಿತ್ರವು ಇದುವರೆಗೆ ಭಾರತದಲ್ಲಿ ಒಟ್ಟು ೫೧೧.೭೦ ಕೋಟಿ ರೂಪಾಯಿ ಗಳಿಸಿದೆ.
ಮಾರುಕಟ್ಟೆಯಲ್ಲಿ ಪಠಾಣ್‌ಗೆ ದೊಡ್ಡ ಉತ್ತೇಜನವನ್ನು ನೀಡಿದೆ. ಮತ್ತೊಂದು ವಾರ ಕೂಡ ಸಿನಿಮಾ ಇನ್ನಷ್ಟು ಹೆಚ್ಚು ಗಳಿಕೆ ಮಾಡಲಿದೆ. ಪಠಾಣ್ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಒಟ್ಟು ೧೮.೨೬ ಕೋಟಿ ಗಳಿಸಿದೆ.
ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ಅವರ ಮೊದಲ ಪ್ರಮುಖ ಪಾತ್ರದ ಪಠಾಣ್, ಪ್ರಭಾಸ್ ಅವರ ಬಾಹುಬಲಿ: ದಿ ಕನ್‌ಕ್ಲೂಷನ್, ಯಶ್ ಅವರ ಕೆಜಿಎಫ್: ಅಧ್ಯಾಯ ೨ ಮತ್ತು ಅಮೀರ್ ಖಾನ್ ಅವರ ದಂಗಲ್ ಅನ್ನು ಈ ವಾರದ ಶುಕ್ರವಾರದ ಸಂಗ್ರಹಗಳೊಂದಿಗೆ ಮೀರಿಸಿದೆ. ಈ ಮೂಲಕ ಸಾರ್ವಕಾಲಿಕ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವಾಗಿದೆ.
ಪಠಾಣ್ ಯಶ್ ರಾಜ್ ಫಿಲ್ಮ್ಸ್ ನ ಸ್ಪೈ ಯೂನಿವರ್ಸ್‌ನ ಒಂದು ಭಾಗವಾಗಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಐಎಸ್‌ಐ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.