ದಾಖಲೆ ಪ್ರಮಾಣದಲ್ಲಿ ಸೋಂಕು ಏರಿಕೆ

ನವದೆಹಲಿ, ಮಾ.೧೪- ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಅದರಲ್ಲಿಯೂ ಈ ವರ್ಷದಲ್ಲಿ ಒಂದೇ ದಿನ ದಾಖಲೆಯ ಪ್ರಮಾಣದಲ್ಲಿ ಸೋಂಕು ದೃಢಪಟ್ಟಿದೆ.
ದೇಶದಲ್ಲಿ ನಿನ್ನೆ ದಾಖಲಾಗಿದ್ದ ಒಟ್ಟಾರೆ ಸೋಂಕಿನ ಪೈಕಿ ಇಂದು ಬೆಳಿಗ್ಗೆವರೆಗೆ ಶೇ.೧.೭ ರಷ್ಟು ಸೋಂಕು ಧೃಡಪಟ್ಟಿದೆ. ಅಂದರೆ ೨೫,೩೨೦ ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಈವರೆಗೆ ೧,೧೩, ೫೯,೦೪೮ ಮಂದಿಗೆ ಸೋಂಕು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕಳೆದ ೨೪ ಗಂಟೆಗಳಲ್ಲಿ ಅತಿಹೆಚ್ಚಿನ ೧೬೧ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಈ ವರ್ಷದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇದಾಗಿದೆ. ದೇಶದಲ್ಲಿ ಹೊಸದಾಗಿ ಮೃತಪಟ್ಟಿರುವರು ಸೇರಿದಂತೆ, ಇದುವರೆಗೂ ೧,೫೮,೬೦೭ ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆಯಿಂದ ಇಂದು ಬೆಳಿಗ್ಗೆ ತನಕ ೧೬,೬೩೭ ಮಂದಿ ಚೇತರಿಸಿಕೊಂಡಿದ್ದು, ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ ೧,೦೯,೮೯,೮೯೭ಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣ ಏರಿಕೆ
ದೇಶದಲ್ಲಿ ದಿನನಿತ್ಯ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಸಕ್ರಿಯ ಪ್ರಕರಣಗಳ ಸಂಖ್ಯೆ ರಾಕೆಟ್ ವೇಗದಲ್ಲಿ ಹೆಚ್ಚಾಗಿದೆ.
ಸದ್ಯ ದೇಶದಲ್ಲಿ ೨,೧೦,೫೪೪ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ ಸೇರಿದಂತೆ, ವಿವಿಧ ರಾಜ್ಯಗಳಲ್ಲಿ ನಿತ್ಯ ಸೋಂಕು ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕಳೆದ ಒಂದೂವರೆ ತಿಂಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸರಿಸುಮಾರು ೮೦ ಸಾವಿರಕ್ಕೆ ಏರಿಕೆಯಾಗಿದೆ. ನಿತ್ಯ ೮ ರಿಂದ ೧೦ ಸಾವಿರ ಆಜುಬಾಜಿನಲ್ಲಿ ಸೋಂಕು ಪ್ರಮಾಣ ಹೆಚ್ಚಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿರುವ ಒಟ್ಟಾರೆ ಸೋಂಕಿನ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.೧೭೬ ರಷ್ಟಿದೆ ಎಂದು ತಿಳಿಸಿದೆ.

ಶೇ.೯೬.೮೧ ಚೇತರಿಕೆ ಕುಸಿತ
ದೇಶದಲ್ಲಿ ಕೊರೊನಾ ಸೋಂಕಿನ ಚೇತರಿಕೆ ಪ್ರಮಾಣ ಕುಸಿದಿದೆ. ಸಕ್ರಿಯ ಪ್ರರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಚೇತರಿಕೆ ಪ್ರಮಾಣ ಕುಸಿಯಲು ಕಾಣವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಸದ್ಯ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.೯೬.೮೧ ರಷ್ಟಿದೆ. ಫೆಬ್ರವರಿ ಮಧ್ಯ ಭಾಗದವರೆಗೆ ಚೇತರಿಕೆ ಪ್ರಮಾಣ ಶೇ.೯೭.೦೬ ಕ್ಕೆ ಏರಿಕೆಯಾಗಿತ್ತು. ಸೋಂಕು ಏರಿಕೆಯಾ ಹಿನ್ನೆಲೆಂiiಲ್ಲಿ ಚೇತರಿಕೆ ಪ್ರಮಾಣ ಕುಸಿದಿದೆ ಎಂದು ಸಚಿವಾಲಯ ತಿಳಿಸಿದೆ.