ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಲು ಮನವಿ

ವಿಜಯಪುರ : ಮೇ.5:ರಾಜ್ಯದ ವಿಕಲಚೇತನ ಮತದಾರರು, ಮೇ-10 ರಂದು ನಡೆಯುವ ವಿಧಾನಸಭಾ ಚುನಾವಣೆ – 2023 ರ ಬುಧವಾರದಂದು ದಾಖಲೆ ಪ್ರಮಾಣದಲ್ಲಿ ಮತದಾನವನ್ನು ಮಾಡಲು ಕರ್ನಾಟಕ ರಾಜ್ಯ ವಿಕಲಚೇತನರ ಸಮಿತಿ, ರಾಜ್ಯದ ವಿಕಲಚೇತನ ಮತದಾರರಲ್ಲಿ ಮನವಿ ಮಾಡಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಮತಕ್ಷೇತ್ರಗಳಲ್ಲಿ ವಿಕಲಚೇತನರ ಮಾದರಿ ಮತಗಟ್ಟೆ ಮಾಡಿರುವುದು ವಿಶೇಷವಾಗಿದೆ. ರಾಜ್ಯದ ಎಲ್ಲ ವಿಕಲಚೇತನ ಮತದಾರರು ಇದರ ಸದುಪಯೋಗಪಡಿಸಿಕೊಂಡು ದಾಖಲೆ ಪ್ರಮಾಣದಲ್ಲಿ ಮತದಾನವನ್ನು ಮಾಡಲು ವಿನಂತಿ ಮಾಡಿದೆ.