ದಾಖಲೆ ಗ್ರಾಮಗಳನ್ನಾಗಿ ಪರಿವರ್ತಿಸಿ ಮಸೂದೆಯನ್ನು ತರಲು ಒತ್ತಾಯ

ದಾವಣಗೆರೆ. ಸೆ.೨೬;  ಕರ್ನಾಟಕದಲ್ಲಿ   ಜಾರಿಯಾದ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ದೊರೆತಿದ್ದು ಇದನ್ನು ದೇಶಾದ್ಯಂತ ವಿಸ್ತರಿಸುವಂತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಸ್ವಯಂಪ್ರೇರಿತರಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಬೇಕೆಂದು ಮಾಜಿ ಅಬಕಾರಿ ಸಚಿವ ಶಿವಮೂರ್ತಿ ನಾಯ್ಕ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ರಾಷ್ಟ್ರದಾದ್ಯಂತ ದಾಖಲೆಯಿಲ್ಲದ ಲಕ್ಷಾಂತರ ಗ್ರಾಮಗಳಿದ್ದು ಇವುಗಳಿಗೆ ಇವುಗಳನ್ನು ದಾಖಲೆ ಗ್ರಾಮಗಳನ್ನಾಗಿ ಪರಿವರ್ತಿಸಿ ಮಸೂದೆಯನ್ನು ತರಬೇಕಾಗಿದೆ ಇದನ್ನು ರಾಷ್ಟ್ರದುದ್ದಕ್ಕೂ ಹಬ್ಬಿಸಬೇಕೆಂದು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಮನವಿ ಮಾಡಿದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ ಸ್ವತಃ ತಾವೇ ಅರ್ಜಿಯನ್ನು ಹಾಕಬೇಕೆಂದು ಮನವಿ ಮಾಡಿದರು.ಕೇವಲ ಸುಪ್ರೀಂಕೋರ್ಟ್ಗೆ ಮಾತ್ರವಲ್ಲದೆ ನೀತಿ ಆಯೋಗದ ಅಧ್ಯಕ್ಷರಿಗೂ ಲೋಕಸಭೆಯ ಸ್ಪೀಕರ್ ಅವರಿಗೂ ಪ್ರಧಾನಮಂತ್ರಿಗಳಿಗೂ ಸೇರಿದಂತೆ ರಾಜ್ಯದ ವಿವಿಧ ಅಧಿಕಾರಿಗಳಿಗೆ ಈ ಕುರಿತು ಪತ್ರ ಬರೆಯಲಾಗಿದೆ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಇಡೀ ದೇಶಕ್ಕೆ ಮಾದರಿಯಾಗಿದ್ದು ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಕಂದಾಯ ರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಕ ಪರಿಗಣಿಸಿ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ದಾಖಲು ಮಾಡುವ ಜತೆಗೆ ರಾಜ್ಯದ ಮುಖ್ಯಕಾರ್ಯದರ್ಶಿಗಳು ಕಂದಾಯ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ ಅರ್ಜಿ ದಾಖಲು ಮಾಡಿಕೊಳ್ಳಬೇಕು ಅಲ್ಲದೆ ಸ್ವಯಂ ಪ್ರೇರಿತರಾಗಿ ಸುಪ್ರೀಂಕೋರ್ಟಿನ ನ್ಯಾಯಾಧೀಶರೇ ಇವನು ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿದರು.ಸಮಾಜದ ಕಟ್ಟ ಕಡೆಯಲ್ಲಿರುವ ಎಲ್ಲಾ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ನಾವುಗಳು ಸುಪ್ರೀಂ ಕೋರ್ಟಿನ ಕದ ತಟ್ಟಲು ಸಿದ್ಧರಿದ್ದೇವೆ ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಾನೂನು  ಅತಿ ಸಾಮಾನ್ಯರು ಬದುಕುವ ಕಂದಾಯ ರಹಿತ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಿ ಇಲ್ಲವಾದಲ್ಲಿ ರಾಷ್ಟ್ರಪತಿಗಳು ಅಂಕಿತ ಹಾಕಿರುವ ಈ ತಿದ್ದುಪಡಿ ಮಸೂದೆಗೆ ಸಂವಿಧಾನ ಅಪಚಾರ ಮಾಡಿದಂತಾಗುತ್ತದೆ ಅಲ್ಲದೆ ಉಲ್ಲಂಘಿಸದಂತೆಯೂ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.