
ಕಲಬುರಗಿ,ಏ 4: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 7,25,000 ರೂ ಹಣವನ್ನು ಅಳಂದ ತಾಲೂಕಿನ ಹಿರೊಳ್ಳಿ ಚೆಕ್‍ಪೆÇೀಸ್ಟ್ ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದ ಸಾಗರ ರಾಠೋಡ ಎಂಬ
ವ್ಯಕ್ತಿಯನ್ನು ವಶಕ್ಕೆ ಪಡೆದ ಪೆÇಲೀಸರು ಹಣದ ಮೂಲದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.ಕಾರು ನಿಲ್ಲಿಸಿ ತಪಾಸಣೆ ಮಾಡಿದ ಸಂದರ್ಭದಲ್ಲಿ ಡಿಕ್ಕಿಯಲ್ಲಿ ಹಣ ಪತ್ತೆಯಾಗಿದೆ.
ಮಾದನ ಹಿಪ್ಪರಗಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.