ದಾಖಲೆ ಇಲ್ಲದ 5.5ಲಕ್ಷ ನಗದು ವಶಕ್ಕೆ


ಸಂಜೆವಾಣಿ ವಾರ್ತೆ
ಹೊಸಪೇಟೆ: ದಾಖಲೆ ಇಲ್ಲದೇ ಬೈಕ್‍ನಲ್ಲಿ ಸಾಗಿಸುತ್ತಿದ್ದ 5.50 ಲಕ್ಷ ರೂ ಹಣವನ್ನು ಟಿ.ಬಿ.ಡ್ಯಾಂ ಪೊಲೀಸರು ಬುಧವಾರ ವಶ ಪಡಿಸಿಕೊಂಡಿದ್ದಾರೆ.
ಕೊಪ್ಪಳದಿಂದ ಹೊಸಪೇಟೆಗೆ ಸಾಗಿಸುತ್ತಿದ್ದ 5.50 ಲಕ್ಷ ರೂ ಹಣವನ್ನು ಸಮೀಪದ ಟಿಬಿ ಡ್ಯಾಂ ಚೆಕ್ ಪೋಸ್ಟ್‍ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಹಾಗೂ ಡಿವೈಎಸ್ಪಿ ಶರಣಬಸವೇಶ್ವರ ಮಾರ್ಗದರ್ಶನದಲ್ಲಿ ಟಿಬಿ ಡ್ಯಾಂ ಸಿಪಿಐ ಶ್ರೀಕಾಂತ್ ಎವಿ, ಪಿಎಸ್‍ಐ ಶೀಲಾ ಮೂಗಣ್ಣನವರ್, ಕ್ರೈಂ ಪಿಎಸ್‍ಐ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಸುರೇಶ್ ಎಸ್ ವಿ, ಸಂತೋಷ್ ನಾಯ್ಕ್, ಹನುಮಂತಪ್ಪ ಇತರಿದ್ದರು. ಕಂದಾಯ ಇಲಾಖೆಯ ಸಿಬ್ಬಂದಿ ಕೊಟ್ರೇಶ್ ಪರಿಶೀಲನೆ ನಡೆಸಿದ್ದಾರೆ.