
ಕಲಬುರಗಿ,ಏ 2: ದಾಖಲೆ ಇಲ್ಲದೇ ವಾಹನದಲ್ಲಿ ಸಾಗಿಸುತ್ತಿದ್ದ 4.50 ಲಕ್ಷ ರೂ.ಹಣವನ್ನು ಜೇವರಗಿ ತಾಲೂಕಿನ ಜೇರಟಗಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಿಂದಗಿ ಕಡೆಯಿಂದ ಬುಲೆರೋ ವಾಹನದಲ್ಲಿ ಹಣ ತೆಗೆದುಕೊಂಡು ಹೊರಟಿದ್ದ ಮೆಹಬೂಬ್‍ಸಾಬ್ ಎಂಬಾತನಿಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆತ ವಡಗೇರಿ ಗ್ರಾಮದಿಂದ ಹಣ ತೆಗೆದುಕೊಂಡು ಹೊರಟಿದ್ದ ಎಂದು ಗೊತ್ತಾಗಿದೆ.ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.