ದಾಖಲೆ ಇಲ್ಲದ 35.48 ಲಕ್ಷ ನಗದು ವಶಕ್ಕೆ

ಇಲಕಲ್ಲ:ಮಾ.31:ಬಾಗಲಕೋಟೆ ಜಿಲ್ಲೆಯ ಹುನಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗುಗ್ಗಲಮರಿ, ಧನ್ನೂರ ಚೆಕ್‍ಪೆÇೀಸ್ಟ ಸೇರಿದಂತೆ ಪ್ಲಾಯಿಂಗ್ ಸ್ಕ್ಯಾಡ್ ತಂಡವು ದಾಖಲೆ ಇಲ್ಲದ ಒಟ್ಟು35.48 ಲಕ್ಷ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದೆ. ಗುಗ್ಗಲಮರಿ ಚೆಕ್‍ಪೆÇೀಸ್ಟನಲ್ಲಿ ತಪಾಸಣೆ ವೇಳೆ 29.46 ಲಕ್ಷ ರೂ, ಧನ್ನೂರ ಚೆಕ್‍ಪೆÇೀಸ್ಟನಲ್ಲಿ 3.23 ಲಕ್ಷ ರೂ ಹಾಗೂ ಪ್ಲಾಯಿಂಗ್ ಸ್ಕ್ಯಾಡ್ ತಂಡದಿಂದ 2.79 ಲಕ್ಷ ರೂ. ಸೇರಿ ಒಟ್ಟು 35.48 ಲಕ್ಷ ರೂ. ಗಳನ್ನು ವಶಕ್ಕೆ ಪಡೆಯಲಾಗಿದೆಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ. ಎಂ ತಿಳಿಸಿದ್ದಾರೆ.