ದಾಖಲೆ ಇಲ್ಲದ 2.43ಲಕ್ಷ ರೂ,  ವಶ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.15 :- ಬೈಕಿನಲ್ಲಿ ಸವಾರನೋರ್ವ ತೆಗೆದುಕೊಂಡು ಹೋಗುತ್ತಿದ್ದ 2,43, 400ರೂ ನಗದು ಹಣವನ್ನು ಕೂಡ್ಲಿಗಿ ಹೊರವಲಯದ ಗೋವಿಂದಗಿರಿ ಚೆಕ್ ಪೋಸ್ಟ್ ಬಳಿ,  ಸಿಬ್ಬಂದಿ ಹಾಗೂ ಪೊಲೀಸರು ಶುಕ್ರವಾರ  ಮಧ್ಯಾಹ್ನ 1-40ಗಂಟೆ ಸುಮಾರಿಗೆ ತಪಾಸಣಾ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ.
ಸಂಡೂರಿನಿಂದ ಕೂಡ್ಲಿಗಿ ಮಾರ್ಗವಾಗಿ ಚಿತ್ರದುರ್ಗ ಕಡೆಗೆ  ಚಿತ್ರದುರ್ಗದ ರಾಘವೇಂದ್ರ ಎಂಬಾತನು ಬೈಕೊಂದರಲ್ಲಿ ಹೋಗುತ್ತಿರುವಾಗ ಚುನಾವಣೆ ಸಂಬಂಧವಾಗಿ ಕೂಡ್ಲಿಗಿ ಹೊರವಲಯದ ಗೋವಿಂದಗಿರಿ ಚೆಕ್ ಪೋಸ್ಟ್ ಬಳಿ ಇಂದು ಮಧ್ಯಾಹ್ನ 1-40ಗಂಟೆ ಸುಮಾರಿಗೆ ಚೆಕ್ ಪೋಸ್ಟ್ ಗೆ ನಿಯೋಜಿಸಲಾಗಿರುವ ಅಧಿಕಾರಿ ನೀಲಾನಾಯ್ಕ್ ಹಾಗೂ ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಮತ್ತು ಸಿಬ್ಬಂದಿ ತಪಾಸಣೆ ಮಾಡುವ  ವೇಳೆ ಆತನ ಬ್ಯಾಗಿನಲ್ಲಿ 2,43,400ರೂ ನಗದು ಹಣ ದೊರೆತಿದ್ದು ಈ ಹಣವು ಸೈಟಿಗೆ ಸಂಬಂಧಿಸಿದಂತೆ ಮಾಸಿಕ ಕಂತಿನ ಹಣ ಕಟ್ಟಿಸಿಕೊಂಡು ಬಂದಿರುವುದಾಗಿ ಎಂದು ಏಜೇಂಟ್ ರಾಘವೇಂದ್ರ ಹೇಳಲಾಗುತ್ತಿದ್ದು  ಈ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲಾತಿ ಆತನ ಬಳಿ ಇಲ್ಲದ ಕಾರಣ ರಾಘವೇಂದ್ರನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ನಗದು ಹಣವನ್ನು ಜಪ್ತಿಮಾಡಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.