ದಾಖಲೆ ಇಲ್ಲದ ೨೦ ಲಕ್ಷ ಹಣ ಜಪ್ತಿ

ಗಬ್ಬೂರು,ಏ.೦೪-ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಮತ್ತು ವಸ್ತುಗಳ ಸಾಗಾಣಿಕೆ ಮೇಲೆ ತೀವ್ರ ನಿಗಾವಹಿಸಿರುವ ಗಬ್ಬೂರು ಠಾಣೆಯ ಪೋಲಿಸರು ಪ್ರತ್ಯೇಕ ಒಂದು ಪ್ರಕರಣದಲ್ಲಿ ದಾಖಲೆ ಇಲ್ಲದ ೨೦ ಲಕ್ಷ ಹಣವನ್ನು ಸೋಮವಾರ ವಶಪಡಿಸಿಕೊಂಡಿದ್ದಾರೆ.
ದೇವದುರ್ಗ ಮಾರ್ಗದಿಂದ ಗಬ್ಬೂರು ಚೆಕ್ ಪೋಸ್ಟ್ ಮಾರ್ಗವಾಗಿ ಸಾಗುತ್ತಿದ್ದ ಕಾರಿನ ತಪಾಸಣೆ ನಡೆಸಿದ ಪೋಲಿಸರು,ದಾಖಲೆ ಇಲ್ಲದ ಸಾಗಿಸುತ್ತಿದ್ದ ೨೦ ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಚೇತನಕುಮಾರ,ಗಬ್ಬೂರು ಪಿಎಸ್‌ಐ ಪ್ರಕಾಶ,ಮನೋಹರ,ಪಿಡಿಒ ಕಿರಣಬಾಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.