ದಾಖಲೆ ಇಲ್ಲದ ಹಣ ಜಪ್ತಿ:ಕುರುಡು ಕಾಂಚಾಣ ಸದ್ದು

ಸಿಂಧನೂರು,ಏ.೦೨- ಯಾವುದೇ ದಾಖಲಾತಿ ಇಲ್ಲದೆ ವಾಹನದಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವಾಹನವನ್ನು ಅಧಿಕಾರಿಗಳು ತಪಾಸಣೆಯನ್ನು ನಡೆಸಿದಾಗ ಹಣಕ್ಕೆ ಯಾವುದೇ ದಾಖಲಾತಿ ಇಲ್ಲದ ಕಾರಣ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಾಲೂಕಾ ಚುನಾವಣಾ ಅಧಿಕಾರಿ ಮಹೇಶ ಪೋತೆದಾರ ಪತ್ರಿಕೆಗೆ ಮಾಹಿತಿಯನ್ನೂ ನೀಡಿದರು.
ತಾಲ್ಲೂಕಿನ ಶಾಂತಿನಗರ (ಹಂಚಿನಾಳ ಕ್ಯಾಂಪ್) ಪೋಷ್ಷ ಬಳಿ ಆಂಧ್ರ ಪ್ರದೇಶದ ಬೊಲೇರ ಮಾಕ್ಸ್ ಚಕ್ ಪೊಷ್ಷು ಬಳಿ ಬಂದಾಗ ಅಧಿಕಾರಿಗಳ ತಂಡ ತಪಾಸಣೆ ನಡೆಸಿದಾಗ ವಾಹನದಲ್ಲಿ ಇದ್ಧ ಹಣಕ್ಕೆ ಯಾವುದೇ ದಾಖಲಾತಿ ಇಲ್ಲದ ಕಾರಣ ಅಧಿಕಾರಿಗಳು ಸುಮಾರು ೯ ಲಕ್ಷ ಹಣವನ್ನು ಜಪ್ತಿ ಮಾಡಿಕೊಂಡರು.
ತಾ.ಪ. ಸಹಾಯಕ ನಿರ್ದೇಶಕರಾದ ಮನೋಹರ. ಪಿಡಿಒ ಗಳಾದ ವೀರಭದ್ರಪ್ಪ. ಮಲ್ಲೇಶಪ್ಪ. ಪೋಲಿಸ ಸಿಬ್ಬಂದಿಗಳಾದ ಬೀರಪ್ಪ. ದೊಡ್ಡ ಬಸವರಾಜ. ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಇದ್ಧರು.
ತಾಲ್ಲೂಕಿನ ಜವಳಗೇರಾ ಹತ್ತಿರ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ಇರುವ ಚಕ್ ಪೋಷ್ಷ ಹತ್ತಿರ ವಾಹನವನ್ನು.ಅಧಿಕಾರಿಗಳು ತಪಾಸಣೆಯನ್ನು ನಡೆಸಿದಾಗ ಹಣಕ್ಕೆ ದಾಖಲಾತಿ ಇಲ್ಲದ ಕಾರಣ ಅಧಿಕಾರಿಗಳು ೫ ಲಕ್ಷ ವನ್ನು ಜಪ್ತಿ ಮಾಡಿಕೊಂಡರು ಇನ್ನು ಚುನಾವಣೆಯ ಕಾವು ರಂಗೇರದಿದ್ಧರು ಸಹ ಕುರುಡು ಕಾಂಚಾಣ ಸದ್ದು ಮಾಡುತ್ತಿದ್ದು ಆಧಿಕಾರಿಗಳು ಇನ್ನು ಮುಂದೆ ಸಹ ಎಚ್ಚರಿಕೆಯಿಂದ ಇರಬೇಕಾಗಿದೆ.