ದಾಖಲೆ ಇಲ್ಲದೇ ಹಣ ಸಾಗಣೆ: 45 ಲಕ್ಷ ರೂ. ವಶ

ಚಾಮರಾಜನಗರ, ಮಾ.23:- ಯಾವುದೇ ದಾಖಲಾತಿ ಇಲ್ಲದೇ ಸಾಗಣಿಕೆ ಮಾಡುತ್ತಿದ್ದ 45 ಲಕ್ಷ ರೂ. ಗಳನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ತಾಲೂಕಿನ ಪುಣಜನೂರು ಚೆಕ್ ಪೆÇೀಸ್ಟ್ ಬಳಿ ನಡೆದಿದೆ.
ಕೇರಳದ ಎರ್ನಾಕುಲಂ ನಿವಾಸಿ ಸಜಿ ಬಿನ್ ವರ್ಗೀಸ್ ಹಣ ಸಾಗಾಟ ಮಾಡುತ್ತಿದ್ದ ಆರೋಪಿ. ಪುಣಜನೂರು ಚೆಕ್ ಪೆÇೀಸ್ಟ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕೇರಳದಿಂದ ಚಾಮರಾಜನಗರಕ್ಕೆ ಬರುತ್ತಿದ್ದ ಕೇರಳ ರಾಜ್ಯದ ನೋಂದಣಿ ಕಾರು (ಕೆಎಲ್40ಎಫ್5000) ಅನ್ನು ತಪಾಸಣೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ದಾಖಲೆ ಇಲ್ಲದೇ ಹಣವನ್ನು ಚಾಮರಾಜನಗರ ಕಡೆಗೆ ಹಣ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಪೂರ್ವ ಪೆÇಲೀಸ್ ಠಾಣೆ ಇನ್ಸ್‍ಪೆಕ್ಟರ್ ಶ್ರೀಕಾಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ 45 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ಸಜಿ ವಿರುದ್ಧ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಈತ ಚಲಾಯಿಸುತ್ತಿದ್ದ ಕಾರನ್ನು ಕೂಡ ಜಪ್ತಿ ಮಾಡಲಾಗಿದೆ.
ಈ ಸಂಬಂಧ ಪೂರ್ವ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.
ಈ ಸಂದರ್ಭದಲ್ಲಿ ಪಿಎಸ್‍ಐ ಮಂಜುನಾಥ್ ಪ್ರಸಾದ್, ಹೆಡ್ ಕಾನ್ಸ್ ಟೇಬಲ್‍ಗಳಾದ ಬಸವಣ್ಣ, ಮಹದೇವಸ್ವಾಮಿ, ಕಾನ್ಸ್ ಟೇಬಲ್‍ಗಳಾದ ಬಸವರಾಜು, ಶ್ರೀನಿವಾಸ ಮೂರ್ತಿ, ನಂದಕುಮಾರ ಇದ್ದರು.