ಅಕ್ರಮ ಹಣ ಸಾಗಾಟ, ಫರಹತಾಬಾದ್ ಚೆಕ್ ಪೋಸ್ಟ್ ನಲ್ಲಿ 1 ಕೋಟಿ ರೂ. ವಶ

ಕಲಬುರಗಿ,.ಮಾ. 31: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ಜಿಲ್ಲೆಯ ಫರಹತಾಬಾದ್ ಚೆಕ್ ಪೋಸ್ಟ್ ನಲ್ಲಿದ್ದ ಎಸ್.ಎಸ್.ಟಿ ತಂಡ ಯಾವುದೇ ದಾಖಲೆ ಇಲ್ಲದ 1 ಕೋಟಿ ರೂ. ಹಣ ವಶಕ್ಕೆ ಪಡೆದಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ.‌ಗುರುಕರ್ ತಿಳಿಸಿದ್ದಾರೆ.

ಇದಲ್ಲದೆ 5 ಲಕ್ಷ‌ ರೂ.ಮೌಲ್ಯದ ಕಾರ್ ಸಹ ವಶಪಡಿಸಿಕೊಂಡು ನಾಲ್ವರ ವಿರುದ್ಧ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂ. 23/2023 ರಂತೆ ಪ್ರಕರಣ ಸಹ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ ಪರಿಣಾಮ ಈ ಹಿಂದೆ 3.5೦ ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು. ಇಂದಿನ 1 ಕೋಟಿ ರೂ. ಸೇರಿ ಇದೂವರೆಗೆ ಜಿಲ್ಲೆಯಾದ್ಯಂತ 4.50 ಕೋಟಿ ರೂ. ವಶಕ್ಕೆ ಪಡೆದಂತಾಗಿದೆ.