ದಾಖಲೆಯಿಲ್ಲದ ಸಾಮಗ್ರಿ ದೊರೆತರೆ ಪ್ರಕರಣ ದಾಖಲಿಸಲು ಸೂಚನೆ

ಚನ್ನಮ್ಮನ ಕಿತ್ತೂ,ಏ13: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಈಗಾಗಲೇ ಕಿತ್ತೂರ ವಿಧಾನಸಭಾ ಕ್ಷೇತ್ರದಲ್ಲಿ 3 ಸ್ಥಳಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ತೆರೆದು ಪ್ರತಿದಿನ ನಿರಂತರವಾಗಿ ವಾಹನಗಳ ತಪಾಸಣಾ ಜರುಗಿಸಲಾಗುತ್ತಿದೆ. ಪಟ್ಟಣದ ಹೊರವಲಯದ ತಿಗಡೊಳ್ಳಿ ಕ್ರಾಸ್ ಹತ್ತಿರದ ಚೆಕ್‍ಪೋಸ್ಟಿಗೆ ಭೇಟಿ ನೀಡಿ ವಾಹನಗಳನ್ನು ಪರಿಶೀಲಿಸಿ ಚೆಕ್‍ಪೋಸ್ಟಿನಲ್ಲಿ ನಡೆಸಲಾಗುವ ಕುರಿತು ಮಾಹಿತಿ ಪಡೆದ ಸಹಾಯಕ ಚುನಾವಣಾಧಿಕಾರಿ ತಾಲೂಕಾ ದಂಡಾಧಿಕಾರಿ ರವೀಂದ್ರ ಹಾದಿಮನಿ ಅವರು ಮಾತನಾಡಿ ಪ್ರತಿಯೊಂದು ವಾಹನ ಪರಿಶೀಲಿಸಿ ದಾಖಲೆಯಿಲ್ಲದ ನಗದು, ಚಿನ್ನಾಭರಣ, ಮದ್ಯ ಹಾಗೂ ಸಾಮಗ್ರಿಗಳನ್ನು ದೊರೆತರೆ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಚೆಕ್ ಪೋಸ್ಟಿನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.
ಈ ವೇಳೆ ಗ್ರಾಮ ಲೆಕ್ಕಿಗ ಸಿದ್ದುನ್ನವರ ಸೇರಿದಂತೆ ಚೆಕ್ ಪೋಸ್ಟ್ ಸಿಬ್ಬಂದಿ ಇದ್ದರು.