ದಾಖಲೆಯಿಲ್ಲದ ಅಕ್ಕಿ ವಶ

ಬಂಗಾರಪೇಟೆ.ಮಾ೨೮:ಲೋಕಸಭೆ ಚುನಾವಣೆ ಪ್ರಯುಕ್ತ ಅಕ್ರಮ ತಡೆಗಟ್ಟಲು ತಾಲ್ಲೂಕಿನ ನಾಲ್ಕು ದಿಕ್ಕುಗಳಲ್ಲಿ ತಪಾಸಣೆ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ಇದರ ಅನ್ವಯ ಚುನಾವಣಾಧಿಕಾರಿಗಳು ಕಳೆದ ವಾರ ೪.೨೦ಲಕ್ಷ ಮೌಲ್ಯದ ದಾಖಲೆಗಳಿಲ್ಲ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡರು. ವಿಪರ್ಯಾಸ ಇದರ ವಿರುದ್ದ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ ಇಂತಹ ಅಧಿಕಾರಿಗಳ ಬೇಜವಾಬ್ದಾರಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಟಿ.ಎನ್.ರಾಮೇಗೌಡ ಒತ್ತಾಯಿಸಿದರು.
ತಾಲ್ಲೂಕು ಕಛೇರಿಯ ಮುಂದೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸಹಯೋಗದಲ್ಲಿ ಅಧಿಕಾರಿಗಳ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮುಖಾಂತರ ಆಹಾರ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ಮಾದ್ಯಮದವರೊಂದಿಗೆ ಮಾತನಾಡಿದ ಅವರು ಪಾರಾದರ್ಶಕ ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದಿದೆ. ಹಾಗೂ ಚುನಾವಣಾ ಅಕ್ರಮಗಳಿಗೆ ತಡೆಗಟ್ಟಲು ತಪಾಸಣಾ ಕೇಂದ್ರಗಳನ್ನು ನಿರ್ಮಿಸಿವೆ ಆದರೆ ಇಲ್ಲಿಯ ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ತಪಾಸಣಾ ಕೇಂದ್ರಗಳು ಆಟಿಕೆಯಂತೆ ಗೊಚರಿಸುತ್ತಿದೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಸಮರ್ಪಕವಾಗಿ ತಪಾಸಣೆ ಮಾಡದೆ ಕಾಟಾಚಾರಕ್ಕೆ ಮಾಡುವಂತಾಗಿದೆ ಎಂದು ಗಂಬೀರ ಆರೋಪ ಮಾಡಿದರು.
ಬಂಗಾರಪೇಟೆ ಮತ್ತು ಕೋಲಾರ ಮುಖ್ಯರಸ್ತೆಯ ದಿಂಬ ಚೆಕ್‌ಪೋಸ್ಟ್ ಬಳಿ ಅಧಿಕಾರಿಗಳು ೪.೨೦ಲಕ್ಷ ಮೌಲ್ಯದ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡರು. ಆದರೆ ಕೋಲಾರದಿಂದ ಪಟ್ಟಣದ ಕಡೆ ಎರಡು ಟೆಂಪೋಗಳಲ್ಲಿ ಬರುತ್ತಿದ್ದ ಅಕ್ಕಿ ಮೂಟೆಗಳನ್ನು ಚೆಕ್ ಪೋಸ್ಟಲ್ಲಿ ಪೊಲೀಸರು ತಡೆದು ತಪಾಸಣೆ ನಡೆಸಿದರು. ಈ ವೇಳೆ ಅವು ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಅಕ್ಕಿ ಎಂದು ತಿಳಿದು ಬಂದಿರುತ್ತದೆ. ಇದರ ಹಿಂದಿನ ಉದ್ದೇಶವಾದರೂ ಏನು ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸಿದರು.
ತಾಲ್ಲೂಕು ಅಧ್ಯಕ್ಷ ಮುರಳಿ, ಕದಿರೇನಹಳ್ಳಿ ರಮೇಶ್, ದೇವರಾಜಪ್ಪ, ಲಕ್ಷ?ಮಮ್ಮ, ಮೋಹನ್, ತಮ್ಮಣ್ಣ, ಮುನಿಸ್ವಾಮಪ್ಪ, ವೆಂಕಟೇಶ್, ಶ್ರೀನಿವಾಸ್, ರವಿ, ನಾಗೇಶ್, ನಂಜುಂಡಪ್ಪ ಹಾಗೂ ಇನ್ನಿತರರಿದ್ದರು.