ದಾಖಲೆಯಿಲ್ಲದೇ ಸಾಗಿಸುತ್ತಿದ್ದ 4 ಲಕ್ಷ ಹಣ ವಶ

ದಾವಣಗೆರೆ. ಏ.೧೩;  ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಹೆಚ್ ಬಸಾಪುರ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದ 4,10,000 ಹಣ ಸಾಗಣೆ ಮಾಡುತ್ತಿದ್ದು ಪತ್ತೆಯಾಗಿದೆ.ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುವ ಸಂಧರ್ಭದಲ್ಲಿ ದಾವಣಗೆರೆ ನಗರದವಾಸಿ  ನಾಗರಾಜ ಅವರು ದ್ವಿಚಕ್ರ ವಾಹನದಲ್ಲಿ  4,10,000 ರೂಗಳನ್ನು ಸಾಗಣೆ ಮಾಡುತ್ತಿದ್ದು  ಹಣವನ್ನು ನಿಯಮಾನುಸಾರ ಜಪ್ತಿ ಮಾಡಿ ಸದರಿ ಹಣವನ್ನು ಜಿಲ್ಲಾ ಖಜಾನೆಯಲ್ಲಿ ಇಡಲಾಗಿದೆ ಎಂದು ಚುನಾವಣಾಧಿಕಾರಿ ದುರ್ಗಾಶ್ರಿ ಎನ್ ತಿಳಿಸಿದ್ದಾರೆ.