ದಾಖಲೆಯಿಲ್ಲದೆ ಸಾಗಿಸುತ್ತಿದ್ದ ರೂ.2.80 ಲಕ್ಷ ರೂ. ವಶ

ಅಥಣಿ :ಏ.10: ಪಟ್ಟಣದ ಸತ್ತಿ ರಸ್ತೆಗೆ ಹೊಂದಿಕೊಂಡಿರುವ ರಾಯಲ್ ಫಂಕ್ಷನ್ ಹಾಲ್ ಹತ್ತಿರ ಮಂಗಳವಾರ ದಿ. 09 ರಂದು ಮುಂಜಾನೆ 11:00 ಗಂಟೆಗೆ ಕೆಎ-01 ಎಂ ಎನ್ – 2081 ಕಾರಿನಲ್ಲಿ ಯಾವುದೇ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2.80 ಲಕ್ಷ (ಎರಡು ಲಕ್ಷ ಎಂಬತ್ತು) ಸಾವಿರ ರೂಗಳನ್ನು ಅಥಣಿ ಪಟ್ಟಣದ ಪ್ಲೇಯಿಂಗ್ ಸ್ಕ್ವಾಡ್ ಸಿಟಿ ಎ ತಂಡ (ಜಾಗೃತಿ ದಳದ) ಮುಖ್ಯಸ್ಥ ವೀರಣ್ಣ ಅ ವಾಲಿ ಹಾಗೂ ಸಹಾಯಕ ರವಿ ಅಂಗಡಿ ಮತ್ತು ಪೆÇಲೀಸ್ ಸಹಾಯಕ ಶಂಕರ ಸವದಿ ಇವರ ತಂಡ ಹಣವನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.